ಇಂಡೋನೆಷ್ಯಾ ಭೂಕಂಪ : 60 ದಾಟಿದ ಸಾವಿನ ಸಂಖ್ಯೆ, ನೂರಾರು ಕಟ್ಟಡಗಳು ನೆಲಸಮ

ಈ ಸುದ್ದಿಯನ್ನು ಶೇರ್ ಮಾಡಿ

Earth-quake-3

ಬಾಂಡಾ ಏಸ್, ಡಿ.7-ಇಂಡೋನೆಷ್ಯಾದ ಸುಮಾತ್ರ ದ್ವೀಪದ ಬಾಂಡಾ ಏಸ್ ಪ್ರಾಂತ್ಯದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದಾರೆ. ಉರುಳಿಬಿದ್ದ ಕಟ್ಟಡಗಳ ಭಗ್ನಾವಶೇಷಗಳ ಅಡಿ ಅನೇಕರು ಸಿಲುಕಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.  ಈವರೆಗೆ 60 ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಅಂಕಿಅಂಶಗಳು ತಿಳಿಸಿವೆ. ಸತ್ತವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಪಿಡೀ ಜಯ ಪ್ರಾಂತ್ಯದ ಜಿಲ್ಲಾ ಉಪ ಪೊಲೀಸ್ ಮುಖ್ಯಸ್ಥ ಮುಲ್ಯಾಡಿ ತಿಳಿಸಿದ್ದಾರೆ.  ರಾಯಿಲಿಯಿಟ್ ಪಟ್ಟಣದ ಉತ್ತರ ದಿಕ್ಕಿನ ಮೇಲೆ 6.5 ತೀವ್ರತೆಯ ಭೂಕಂಪ ಅಪ್ಪಳಿಸಿದೆ. ಭೂಕಂಪನದ ನಂತರ ಕನಿಷ್ಠ ಐದು ಬಾರಿ ಭೂಮಿ ಮತ್ತೆ ಕಂಪಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೆ ಇಲಾಖೆ (ಯುಎಸ್‍ಜಿಎಸ್) ತಿಳಿಸಿದೆ.

ಮುಸ್ಲಿಮರ ಪ್ರಾಬಲ್ಯವಿರುವ ಈ ಪ್ರಾಂತ್ಯದಲ್ಲಿ ಜನರು ಮುಂಜಾನೆ ಪ್ರಾರ್ಥನೆಯ ಸಿದ್ದತೆಯಲ್ಲಿದ್ದಾಗ ಭೂಕಂಪ ಅಪ್ಪಳಿಸಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.  ಭೂಕಂಪದ ತೀವ್ರತೆಯಿಂದ ಮಸೀದಿಗಳು, ಮನೆಗಳು, ಅಂಗಡಿಗಳು ನೆಲಸಮವಾಗಿವೆ. ಆವಶೇಷಗಳಡಿ ಅನೇಕರು ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ಗಾಯಗೊಂಡಿರುವ ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇದರಿಂದಾಗಿ ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin