ಸಾಗರದಿಂದ ಹೊನ್ನಾವರಕ್ಕೆ ಸಾಗಿಸುತ್ತಿದ್ದ 2000 ಮುಖಬೆಲೆಯ 37 ಲಕ್ಷ ರೂ.ಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

Honnavar

ಉತ್ತರ ಕನ್ನಡ ,ಡಿ.7-ಅಕ್ರಮವಾಗಿ ಸಾಗಿಸುತ್ತಿದ್ದ 37ಲಕ್ಷ ರೂ.ಗಳನ್ನು ಹೊನ್ನಾವರ ಪೊಲೀಸರು ಪತ್ತೆಹಚ್ಚಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದ ನಿವಾಸಿ ಅಬ್ದುಲ್ ಲತೀಫ್ ಬಂಧಿತ ವ್ಯಕ್ತಿ. ಇಂದು ಮುಂಜಾನೆ ಸಿಫ್ಟ್ ಕಾರೊಂದರಲ್ಲಿ ಸಾಗರದಿಂದ ಹೊನ್ನಾವರಕ್ಕೆ 2000 ಮುಖಬೆಲೆಯ 32 ಲಕ್ಷ ರೂ. ಹಾಗೂ 100 ರೂ. ಮುಖಬೆಲೆಯ 5 ಲಕ್ಷ ರೂ.ಗಳನ್ನು ಸಾಗಿಸುತ್ತಿದ್ದ ವೇಳೆ ಗೇರುಸೊಪ್ಪು ರಸ್ತೆ ಬಳಿ ಪೊಲೀಸರು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.

ಪೊಲೀಸರು ಲತೀಫ್‍ನನ್ನು ವಿಚಾರಣೆಗೊಳಪಡಿಸಿದಾಗ ವ್ಯಕ್ತಿಯೊಬ್ಬರಿಗೆ ಬಿಲ್ ಕೊಡಲು ತೆರಳುತ್ತಿರುವುದಾಗಿ ತಿಳಿಸಿದ್ದಾನೆ. ಸರಿಯಾದ ದಾಖಲೆಗಳಿಲ್ಲದ ಕಾರಣ ಅಬ್ದುಲ್ ಲತೀಫ್‍ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀರ್ಥಹಳ್ಳಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin