ಹಳಿ ತಪ್ಪಿದ ಕ್ಯಾಪಿಟಲ್ ಎಕ್ಸ್ ಪ್ರೆಸ್ ರೈಲಿನ 2 ಬೋಗಿಗಳು : 2 ಸಾವು, 35ಕ್ಕೂ ಹೆಚ್ಚು ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Capital-Express

ಗುವಾಹತಿ, ಡಿ.7-ಕ್ಯಾಪಿಟಲ್ ಎಕ್ಸ್‍ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿ ಇಬ್ಬರು ಮೃತಪಟ್ಟು, 35ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಶ್ಚಿಮಬಂಗಾಳದ ಅಲಿಪುರ್‍ದೌರ್ ಜಿಲ್ಲೆಯ ಸುಮುಖತಲ ರೈಲು ನಿಲ್ದಾಣದ ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ. ಬಿಹಾರದ ರಾಜೇಂದ್ರ ನಗರದಿಂದ ಅಸ್ಸಾಂ ರಾಜಧಾನಿ ಗುವಾಹತಿಗೆ ಹೊರಟಿದ್ದ ರೈಲಿನ ಎರಡು ಬೋಗಿಗಳು ನಿನ್ನೆ ರಾತ್ರಿ 9ರಲ್ಲಿ ಉತ್ತರ ಬಂಗಾಳದ ಅಲಿಪುರ್‍ದೌರ್ ರೈಲು ನಿಲ್ದಾಣದಿಂದ 32 ಕಿ.ಮೀ.ದೂರದಲ್ಲಿ ಹಳಿತಪ್ಪಿತು. ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಗಳುಗಳನ್ನು ಅಲಿಪುರ್‍ದೌರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ರೈಲಿನ ಬೋಗಿಗಳು ಹಳಿ ತಪ್ಪಿದ ಕಾರಣ ಈ ಎರಡೂ ಮಾರ್ಗಗಳ ನಡುವೆ ಇತರ ರೈಲುಗಳ ಸಂಚಾರಕ್ಕೆ ಅಡಚಣೆಯಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin