ಹೊಸ ನೋಟುಗಳ ಕದ್ದು ಮನೆ ಮನೆ ಬಿಟ್ಟು ಹೋಗಿದ್ದ ಬಾಲಕರು ಮರಳಿ ಮನೆಗೆ

ಈ ಸುದ್ದಿಯನ್ನು ಶೇರ್ ಮಾಡಿ

3-Idiots

ಹುಬ್ಬಳ್ಳಿ, ಡಿ.7-ಹೊಸ ನೋಟುಗಳನ್ನು ಕದ್ದು ಮನೆ ತೊರೆದಿದ್ದ ಅಪ್ರಾಪ್ತ ಬಾಲಕರು ಹಣವೆಲ್ಲ ಖಾಲಿಯಾದ ನಂತರ ಮನೆಗೆ ಮರಳಿದ್ದಾರೆ. ಸೋನಿಯಾಗಾಂಧಿನಗರದ ನಿವಾಸಿಗಳಾದ ಸುಶಾಂತ ಬಿಲಾನಾ (16), ಶಿವ ವಜ್ಜಣ್ಣವರ (16), ವಿನಾಯಕ ವಜ್ಜಣ್ಣವರ (17) ಸಹಪಾಠಿಗಳಾಗಿರುವ ಈ ಮೂವರು ಬಾಲಕರು ಸೇರಿಕೊಂಡು ಸುಶಾಂತ ಬಿಲಾನಾ ಮನೆಯಲ್ಲಿದ್ದ 12 ಸಾವಿರ ರೂ.ಗಳ ಹೊಸ ನೋಟುಗಳನ್ನು ಕದ್ದು ಪರಾರಿಯಾಗಿದ್ದರು. ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿರುವ ಬಾಲಕರು, ಹಣ ಕದ್ದ ನಂತರ ರೈಲಿನಲ್ಲಿ ದೆಹಲಿಗೆ ಹೋಗಿದ್ದರು. ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗುವವರೆಗೂ ರೈಲ್ವೆ ಹಾಗೂ ಬ ಸ್‍ನಿಲ್ದಾಣಗಳಲ್ಲಿ ಕಾಲ ಕಳೆದು ಕದ್ದೊಯ್ದಿದ ಹಣವನ್ನೆಲ್ಲಾ ಖರ್ಚು ಮಾಡಿಕೊಂಡು ಖಾಲಿಯಾದ ನಂತರ ಈ ಮೂವರು ಅಪ್ರಾಪ್ತ ಬಾಲಕರು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಬೆಂಟಿಗೇರಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕರು ನಾಪತ್ತೆಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin