Exclusive : ಜಯಾ ಹುಟ್ಟಿದ್ದು ಮೇಲುಕೋಟೆಯಲ್ಲಲ್ಲ ತುಮಕೂರಿನ ಅಯ್ಯನಹಳ್ಳಿ ಗ್ರಾಮದಲ್ಲಿ ಎನ್ನುತ್ತಿವೆ ಈ ಸಾಕ್ಷಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Jaya-1
ತುಮಕೂರು, ಡಿ.7- ತಮಿಳುನಾಡಿನ ಅಮ್ಮ ಜಯಲಲಿತಾ ಅವರು ಹುಟ್ಟಿದ ಸ್ಥಳ ಯಾವುದು, ಪೂರ್ವಿಕರು ಎಲ್ಲಿದ್ದರು ಎಂಬುದರ ಬಗ್ಗೆ ಹಲವರು ಒಂದೊಂದು ಕಥೆ ಹೇಳುತ್ತಾರೆ. ಆದರೆ, ತುಮಕೂರು ಜಿಲ್ಲೆಗೂ ಅದರ ನಂಟಿದೆ ಎಂಬುದರ ಬಗ್ಗೆ ಬಲವಾದ ಸಾಕ್ಷಿ ಇದೆ..! ಜಯಲಲಿತಾ ಅವರು ಮೇಲುಕೋಟೆಯಲ್ಲಿ ಜನಿಸಿದರು ಎಂದು ಹಲವರು ಹೇಳುತ್ತಾರೆ. ಆದರೆ, ಇವರ ಹತ್ತಿರದವರು ಶ್ರೀರಂಗಂನಲ್ಲಿ ಎಂದು ಹೇಳುತ್ತಾರೆ. ಈಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಅಯ್ಯನಹಳ್ಳಿ ಗ್ರಾಮದಲ್ಲಿ ಹುಟ್ಟಿದ್ದು ಎಂದು ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ.

Jaya-3

ಇಲ್ಲಿನ ಗ್ರಾಮಸ್ಥರು ಹೇಳುವ ಪ್ರಕಾರ, ನೆರೆರಾಜ್ಯ ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಅಯ್ಯನಹಳ್ಳಿ ಗ್ರಾಮಸ್ಥರು ಈ ಸಂಜೆ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ, ಮದ್ರಾಸ್ ಸರ್ಕಾರದ ಆಡಳಿತದಲ್ಲಿ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶ್ರೀನಿವಾಸಾಚಾರ್‍ಎಂಬುವರು ಆಂಧ್ರದ ಗಂಗಳವಾಯಿಪಾಳ್ಯ ಗ್ರಾಮದಲ್ಲಿ ಮನೆಯಲ್ಲಿ ಹೊಂದಿದ್ದರು. ಇವರು ಮೈಸೂರು ರಾಜ ಮನೆತನದಿಂದ ಜಮೀನನ್ನು ಇನಾಮ್‍ದಾರಿ ಪದ್ಧತಿಯಲ್ಲಿ ಹಲವು ಎಕರೆ ಭೂಮಿ ಪಡೆದಿದ್ದರು. ಅವರಿಗೆ ಅಯ್ಯನಹಳ್ಳಿ ಗ್ರಾಮದಲ್ಲಿ ನೆಂಟರಿದ್ದರು.

ಆ ಕಾಲದಲ್ಲಿ ಬಂಗಲೆ ಎಂದು ಕರೆಯಲ್ಪಡುವ ಮನೆಯಲ್ಲಿ ತಮಿಳುನಾಡಿನ ದಿ. ಮುಖ್ಯಮಂತ್ರಿ ಜಯಲಲಿತಾ ಅವರ ಪೂರ್ವಿಕರು ನೆಲೆಸಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.
ಹಿಂದೆ ಈ ಗ್ರಾಮದಲ್ಲಿ ಅಯ್ಯಂಗಾರಿ ಕುಟುಂಬಗಳು ಹೆಚ್ಚಾಗಿ ವಾಸವಾಗಿದ್ದವು. ಈ ಗ್ರಾಮಕ್ಕೆ ಅಯ್ಯನಹಳ್ಳಿ ಎಂಬ ಹೆಸರನ್ನು ಮೈಸೂರು ರಾಜರ ಆಳ್ವಿಕೆಯಲ್ಲೇ ನಾಮಕರಣ ಮಾಡಲಾಗಿತ್ತು ಎಂದು ಶಾಲಾ ದಾಖಲಾತಿಗಳ ಮುಖಾಂತರ ದೃಢಪಡುತ್ತದೆ. ಇಲ್ಲಿದ್ದ ಶ್ರೀನಿವಾಸಾಚಾರ್ ಅವರ ಪುತ್ರ ಬಾಲಕೃಷ್ಣಮಾಚಾರ್-ವೇದಾವತಿ ದಂಪತಿಯ ಮಡಕಶಿರ ಮತ್ತು ರೊಳ್ಳೆ ಗ್ರಾಮದ ಮುಖ್ಯರಸ್ತೆಯಲ್ಲಿರುವ ಅಯ್ಯನಹಳ್ಳಿಯಲ್ಲಿ ವಾಸವಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಅದರಲ್ಲಿ ಒಬ್ಬಾಕೆ ಜಯಲಲಿತಾ ಎಂದು ಹೇಳುತ್ತಾರೆ.

Jaya-2

ಇಲ್ಲಿ ನೆಲೆಸಿದ್ದಾಗ ದಂಪತಿ ನಡುವೆ ವಿರಸವುಂಟಾಗಿ ವೇದಾವತಿಯವರು ಮಗಳನ್ನು ಕರೆದುಕೊಂಡು ಗ್ರಾಮ ತೊರೆದಿದ್ದರು ಎಂದು ಶತಾಯುಷಿಯಾಗಿರುವ ಚೌಡಮ್ಮ ಎಂಬುವರು ತಿಳಿಸುತ್ತಾರೆ. ಇತ್ತೀಚೆಗೆ ಜಯಲಲಿತಾ ಅವರ ಸಂಬಂಧಿಕರು ಎಂದು ಹೇಳಿಕೊಂಡು ಸುಮಾರು ನಾಲ್ಕು ಜನರ ತಂಡವೊಂದು ಬಂಗಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ತೆರಳಿದ್ದರು.
ಈಗ ಇಲ್ಲಿ ಜಯಲಲಿತಾ ಅವರ ಸಂಬಂಧಿಕರು ಬಂದು ಹೋಗುತ್ತಾರೆ. ಕೆಲ ದಿನ ತಂಗಿ ಅಕ್ಕಪಕ್ಕದವರನ್ನು ಮಾತನಾಡಿಸಿಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಜಯಲಲಿತಾ ಅವರು ಕರ್ನಾಟಕದಲ್ಲಿ ಹುಟ್ಟಿದ್ದು ಎಂಬುದರ ಬಗ್ಗೆ ಮಾಹಿತಿಗಳು ಒಂದೊಂದೇ ಬೆಳಕಿಗೆ ಬರುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin