ನೋಟಿಗಾಗಿ ಸರತಿ ಸಾಲಲ್ಲಿ ನಿಂತಿದ್ದ ನಿವೃತ್ತ ಸೈನಿಕನಿಗೆ ಪೊಲೀಸ್ ಪೇದೆಯಿಂದ ಥಳಿತ

ಈ ಸುದ್ದಿಯನ್ನು ಶೇರ್ ಮಾಡಿ

Note-Ban-Bank

ಬಾಗಲಕೋಟೆ,ಡಿ.8-500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆಗಿ ಇಂದಿಗೆ ಬರೋಬ್ಬರಿ 30 ದಿನ. ಆದರೂ ಬ್ಯಾಂಕ್‍ಗಳ ಮುಂದೆ ಸರತಿ ಸಾಲುಗಳು, ಗ್ರಾಹಕರ ಹೊಡೆದಾಟ-ಬಡಿದಾಟಗಳು ಮಾತ್ರ ಕಡಿಮೆಯಾಗಿಯೇ ಇಲ್ಲ.  ಬ್ಯಾಂಕ್ ಎದುರು ಹಣಕ್ಕಾಗಿ ಸರದಿ ಸಾಲಿನಲ್ಲಿ ನಿಂತ ಸಂದರ್ಭ ಸ್ವತಃ ಒಬ್ಬ ಪೊಲೀಸ್ ಪೇದೆ ವ್ಯಕ್ತಿಯೊಬ್ಬರನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಸಮವಸ್ತ್ರದಲ್ಲೆ ಇದ್ದ ಪೊಲೀಸ್ ಪೇದೆ ದೇವರಾಜ್ ಎಂಬ ವ್ಯಕ್ತಿ ಬ್ಯಾಂಕ್ ಎದುರು ನಿವೃತ್ತ ಸೈನಿಕ ನಂದಪ್ಪ ಭದ್ರಶೆಟ್ಟಿ ಎಂಬುವರನ್ನು ಮುಖಮೂತಿ ನೋಡದೆ ಥಳಿಸಿದ್ದಾನೆ. ನೂರಾರು ಜನ ಬ್ಯಾಂಕ್ ಎದುರು ಕಾಯುತ್ತ ನಿಂತಿದ್ದರು. ಆಗ ಬ್ಯಾಂಕ್ ಬಾಗಿಲು ತೆರೆದಿದೆ.

ನಿಂತಿದ್ದವರೆಲ್ಲ ಏಕಕಾಲಕ್ಕೆ ಒಳಕ್ಕೆ ನುಗ್ಗಿದ್ದರಿಂದ ನೂಕುನುಗ್ಗಲು ಉಂಟಾಗಿ ತಳ್ಳಾಟ, ನೂಕಾಟಗಳು ನಡೆದಿವೆ. ಈ ವೇಳೆ ಒಳಗಿನಿಂದ ಬರುತ್ತಿದ್ದ ಪೊಲೀಸ್ ಪೇದೆ ದೇವರಾಜ ತನ್ನನ್ನು ತಳ್ಳಿದರು ಎಂದು ಭದ್ರಪ್ಪ ನಂದಶೆಟ್ಟಿ ಅವರ ಮೇಲೆ ತನ್ನ ಪರಾಕ್ರಮ ಮೆರೆದಿದ್ದಾನೆ. ಜನ ಬಿಡಿಸುವ ಪ್ರಯತ್ನ ಮಾಡಿದರೂ ಕೂಡ ಸಮಾಧಾನಗೊಳ್ಳದ ಪೇದೆ ವಯಸ್ಸಾಗಿದ್ದ ನಿವೃತ್ತ ಸೈನಿಕರನ್ನು ಹಿರಿಯ ಎಂದೂ ನೋಡದೆ ಹಲ್ಲೆ ನಡೆಸಿದ್ದಾನೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin