ನೋಟ್ ಬ್ಯಾನ್’ ಆಗಿ ಇಂದಿಗೆ 30 ದಿನ : ಇ-ಪೇಮೆಂಟ್ ಮಾಡುವವರಿಗೆ ಜೇಟ್ಲಿ ಗಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arun-jailtuy

ನವದೆಹಲಿ. ಡಿ.08 : ನೋಟ್ ಬ್ಯಾನ್ 1 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಘೋಷ್ಠಿ ನಡೆಸಿ ಸಹಕಾರ ನೀಡಿದ ದೇಶದ ಜನತೆಗೆ ಧನ್ಯವಾದ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕ್ಯಾಶ್ ಲೆಸ್ ವ್ಯವಹಾರಗಳಿಗೆ ಒತ್ತು ನೀಡಲು ಇ ಪೇಮೆಂಟ್ ನಲ್ಲಿ ಕೆಲವು ರಿಯಾಯಿತಿಗಳನ್ನು ಘೊಷಿಸಿದ್ದಾರೆ.  ಪೆಟ್ರೋಲ್, ಡೀಸೆಲ್ ವ್ಯವಹಾರವನ್ನು ಶೇ. 40 ರಷ್ಟು ಕ್ಯಾಶ್ ಲೆಸ್ ಆಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಇ ಪೇಮೆಂಟ್ ನಲ್ಲಿ ವ್ಯವಹರಿಸಿದರೆ, ರೈಲ್ವೇ, ಸಾಮಾನ್ಯ ವಿಮೆ, ಟೋಲ್ ಗೇಟ್ ಗಳಲ್ಲಿ ವಿನಾಯಿತಿ ಸಿಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಜೇಟ್ಲಿ ಘೋಷಿಸಿದ ಕೆಲವು ರಿಯಾಯಿತಿಗಳು ಇಲ್ಲಿವೆ ನೋಡಿ :

  • ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೂಲಕ 2000 ವರೆಗಿನ ಯಾವುದೇ ವಹಿವಾಟಿಗೆ ಯಾವುದೇ ಸರ್ವೀಸ್ ಚಾರ್ಜ್ ಇರುವುದಿಲ್ಲ.
  • 8 ಸಾವಿರ ಜನರಿರುವ ಪ್ರತಿ ಹಳ್ಳಿಗೂ 2  POS ( Point of Sale machines) ಮಷಿನ್ ಗಳನ್ನು ನೀಡಲಾಗುವುದು. ಇದರಿಂದ 75 ಕೋಟಿ ಜನ ಉಪಯೋಗ ಪಡೆಯಬಹುದು.
  • ಕಾರ್ಡ್ ಪೇಮೆಂಟ್ ನಿಂದ ಪೆಟ್ರೋಲ್ ಖರೀದಿಸುವ ಗ್ರಾಹಕರಿಗೆ ವಿನಾಯಿತಿ ನೀಡಲಾಗಿದೆ.
    ಪ್ರತಿ ನಿತ್ಯ 4.5 ಕೋಟಿ ಜನ ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಇನ್ನುಮುಂದೆ ಕಾರ್ಡ್ ಬಳಸಿ ಪೆಟ್ರೋಲ್ ಖರೀದಿಸುವ ಗ್ರಾಹಕರಿಗೆ ಶೇ.0.75 ರಷ್ಟು ವಿನಾಯಿತಿ ಸಿಗಲಿದೆ.
  • ಇ- ಪೇಮೆಂಟ್ ಮೂಲಕ ರೈಲ್ವೆ ಟಿಕೆಟ್ ಖರೀದಿಸುವವರಿಗೆ ರೂ. 10 ಲಕ್ಷದ ವಿಮೆ ದೊರೆಯಲಿದೆ. ಜೊತೆಗೆ ವಸತಿ, ಊಟವನ್ನು ಸೇರಿ ಬುಕ್ ಮಾಡುವವರಿಗೆ ಶೇ. 05 ರಷ್ಟು ರಿಯಾಯಿತಿ ದೊರೆಯಲಿದೆ.
  • ಜನೆವರಿ 1 2017 ರಿಂದ ಸಬರ್ಬನ್ ರೈಲು ಟಿಕೆಟ್ ಗಳನ್ನು ಈ ಪೇಮೆಂಟ್ ಮೂಲಕ ಖರೀದಿಸುವವರಿಗೆ ಶೇ.0.5 ರಷ್ಟು ರೀಯಾಯಿತಿ ದೊರೆಯಲಿದೆ.
  • ಇ- ಪೇಮೆಂಟ್ ಮೂಲಕ ಸರ್ಕಾರಿ ವಿಮೆ ಕಂಪನಿಯಲ್ಲಿ ಸಾಮಾನ್ಯ ವಿಮೆ ಕಂತು ತುಂಬುವವರಿಗೆ ಶೇ. 10 ರಷ್ಟು ಹಾಗೂ ಜೀವ ವಿಮೆ ಪಾವತಿಸುವವರಿಗೆ ಶೇ. 8 ರಷ್ಟು ರಿಯಾಯಿತಿ ದೊರೆಯಲಿದೆ.
  • ಸರ್ಕಾರಿ ಇಲಾಖೆಗಳಲ್ಲಿ ಇ- ಪೇಮೆಂಟ್ ಗೆ ಯಾವುದೇ ಸೇವಾ ಶುಲ್ಕ ಇರುವುದಿಲ್ಲ.
  • ಟೋಲ್ ಗಳಲ್ಲಿ ಇ ಪೇಮೆಂಟ್ ಮಾಡಿದರೆ ಶೇ. 10 ರಷ್ಟು ರಿಯಾಯಿತಿ ದೊರೆಯಲಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin