ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (09-12-2016)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಸುಖದಲ್ಲಿ ರೋಗದ ಭಯವಿದೆ, ಕುಲದಲ್ಲಿ ಕೆಟ್ಟ ಹೆಸರಿನ ಭಯವುಂಟು, ಹಣವಿದ್ದರೆ ರಾಜನ ಭಯ, ಶಾಸ್ತ್ರದಲ್ಲಿ ಪ್ರತಿವಾದಿಗಳ ಭಯ, ಬಲಪರಾಕ್ರಮದಲ್ಲಿ ಶತ್ರುಗಳ ಭಯ. ದೇಹಕ್ಕೆ ಯಮನ ಭಯ, ಮಾನದಲ್ಲಿ ದೈನ್ಯತೆಯ ಭಯ, ರೂಪದಲ್ಲಿ ಮುಪ್ಪಿನ ಭಯ. ಮನುಷ್ಯರಿಗೆ ಎಲ್ಲ ವಸ್ತುಗಳಲ್ಲಿಯೂ ಭಯವಿದೆ. ಆದರೆ ವೈರಾಗ್ಯವೇ ಭಯವಿಲ್ಲದ್ದು .  – ವೈರಾಗ್ಯಶತಕ

Rashi x1

 ಪಂಚಾಂಗ : ಶುಕ್ರವಾರ, 09.12.2016

ಸೂರ್ಯ ಉದಯ ಬೆ.6.31 / ಸೂರ್ಯ ಅಸ್ತ  ಸಂ.5.54
ಚಂದ್ರ ಅಸ್ತ  ಮ.1.56 / ಚಂದ್ರ ಉದಯ ರಾ.2.28
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ (ರಾ.10.29)
ನಕ್ಷತ್ರ: ಉತ್ತರಾಭಾದ್ರ (ಬೆ.10.12) / ಯೋಗ: ವ್ಯತಿಪಾತ (ರಾ.8.30) / ಕರಣ: ತೈತಿಲ-ಗರಜೆ  (ಬೆ.11.37-ರಾ.10.29)
ಮಳೆ ನಕ್ಷತ್ರ: ಅನುರಾಧ / ಮಾಸ: ವೃಶ್ಚಿಕ / ತೇದಿ: 24


ಮೇಷ: ಬುದ್ದಿವಂತಿಕೆಯಿಂದ ಕಾರ್ಯ ಸಾಧನೆ. ವೈರಿಗಳು ನಿಮ್ಮ ಏಳಿಗೆಯಿಂದ ಕೊರಗುತ್ತಿದ್ದಾರೆ.
ವೃಷಭ: ವಿನೋದಯುಕ್ತ ಕಾಲಕ್ಷೇಪಗಳ ಮೂಲಕ ಸಂತಸದ ಕ್ಷಣಗಳು ನಿಮ್ಮದಾಗಲಿದೆ.
ಮಿಥುನ: ಚಟುವಟಿಕೆಯಿಂದ ಕೂಡಿದ ದಿನ.
ಕರ್ಕಾಟಕ: ದಿನದಲ್ಲಿ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ. ಆಸ್ತಿ ಖರೀದಿಗೆ ಚಿಂತನೆ.
ಸಿಂಹ: ದೂರದ ಪ್ರಯಾಣ ಉತ್ಸಾಹ ಮತ್ತು ಆನಂದ ನೀಡಲಿದೆ.
ಕನ್ಯಾ: ದಿನದಲ್ಲಿ ನಿಮ್ಮ ಹಳೆಯ ವಾಹನ ಚಾಲನೆಯಲ್ಲಿ ಎಚ್ಚರವಿರಲಿ.
ತುಲಾ: ಕುಟುಂಬದಲ್ಲಿ ಉತ್ತಮ ಆರ್ಥಿಕತೆ. ಅಧಿಕ ಖರ್ಚು.
ವೃಶ್ಚಿಕ: ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಯಶಸ್ವಿಯಾಗುತ್ತೀರಿ.
ಧನಸ್ಸು: ನಿಮ್ಮ ಪರಿಶ್ರಮದಿಂದ ಹಿಂದಿನ ಮುಗಿಯದ ಕೆಲಸಗಳು ಮುಗಿಯತೊಡಗುತ್ತವೆ. ಮನೆಯಲ್ಲಿ ಸಂತಸದ ವಾತಾವರಣ.
ಮಕರ: ಪ್ರೀತಿ ಮತ್ತು ಪ್ರಣಯಕ್ಕೆ ಸುಸಮಯ. ಪ್ರವಾಸ ಯೋಗ.
ಕುಂಭ: ಮನರಂಜನೆಗಾಗಿ ಯೋಚಿಸುವ ಸಮಯ ಇದು. ಒಡಹುಟ್ಟಿದವರೊಡನೆ ಮಾತಿನ ಚಕಮಕಿ.
ಮೀನ: ದೀರ್ಘ ಕಾಲ ಬದ್ಧತೆಗಳಿಗೆ ಕೈಹಾಕುವ ಮೊದಲು ಎರಡು ಬಾರಿ ಯೋಚನೆ ಮಾಡಿ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin