ದಕ್ಷಿಣ ಪೆಸಿಫಿಕ್ ಸಾಗರದ ಸಾಲೋಮನ್ ದ್ವೀಪದಲ್ಲಿ ಭಾರೀ ಭೂಕಂಪ, ಸುನಾಮಿ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

Earthquake--0-----2

ಸಿಡ್ನಿ/ವೆಲ್ಲಿಂಗ್ಟನ್, ಡಿ.9-ದಕ್ಷಿಣ ಪೆಸಿಫಿಕ್ ಸಾಗರದ ಸಾಲೋಮನ್ ದ್ವೀಪದಲ್ಲಿ ಇಂದು ಮುಂಜಾನೆ ಭಾರೀ ಭೂಕಂಪ ಸಂಭವಿಸಿದೆ. ಸಾವು-ನೋವು ಬಗ್ಗೆ ವರದಿಗಳಿಲ್ಲವಾದರೂ ಸುನಾಮಿ ಅಪ್ಪಳಿಸುವ ಭೀತಿ ಇದೆ. ರಿಕ್ಟರ್ ಮಾಪಕದಲ್ಲಿ 7.8ರಷ್ಟು ತೀವ್ರತೆ ಇದ್ದ ಭೂಕಂಪದ ಕೇಂದ್ರ ಬಿಂದು ಸಾಗರಗರ್ಭದಲ್ಲಿತ್ತು. ಭೂಕಂಪದಿಂದಾಗಿ ಸುನಾಮಿ ಅಪ್ಪಳಿಸುವ ಬಗ್ಗೆ ಸಾಲೋಮನ್ ದ್ವೀಪಗಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂಧ್ರ ಎಚ್ಚರಿಕೆ ನೀಡದೆ.  ಪ್ರಬಲ ಭೂಕಂಪದಿಂದಾಗಿ ಮಲೈಟಾ ಪ್ರದೇಶದಲ್ಲಿ ಕೆಲವು ಕಟ್ಟಡಗಳು ಕುಸಿದಿವೆ ಎಂದು ಕೇಂದ್ರದ ನಿರ್ದೇಶಕ ಲೋಟಿ ಯೇಟ್ಸ್ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ದ್ವೀಪದ ಸುತ್ತಮತ್ತಲ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin