ಮಾಜಿ ಸಚಿವ ಸತೀಶ್ ಜಾರಕೀಹೊಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Satish-Jarakihole

ಬೆಂಗಳೂರು, ಡಿ.10- ಜಮೀನು ಕಬಳಿಕೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕೀಹೊಳಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಸರ್ಕಾರಿ ಮುಖ್ಯಕಾರ್ಯದರ್ಶಿಗಳಿಗೆ ಕಾಂಗ್ರೆಸ್‍ನ ಮಾಜಿ ಸದಸ್ಯ ಶಂಕರ್ ಮುನವಳ್ಳಿ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಭಾರೀ ಹಗರಣವಾಗಿದ್ದು, ಬೆಳಗಾವಿಯ ಪ್ರಭಾವಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಮಾಜಿ ಸಚಿವ ಜಾರಕೀಹೊಳಿ ಅವರು ಬೆಳಗಾವಿ ನಗರದಲ್ಲಿ ಎಸ್‍ಸಿ-ಎಸ್‍ಟಿಗಳಿಗಾಗಿ ಸರ್ಕಾರ ಮೀಸಲಿಟ್ಟಿದ್ದ ಸರ್ವೆ ನಂ.3928, 3929, 2829, 29/1, 29/2 ಹಾಗೂ 29/5ರಲ್ಲಿನ ಒಟ್ಟು 40 ಎಕರೆ ಜಮೀನನ್ನು ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಕಾರ್ಮಿಕರ ಹೆಸರಿನಲ್ಲಿ ಖರೀದಿಸಿ ಮಾರಾಟ ಮಾಡದಂತೆ ಕರಾರುಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

2016ರ ಜು.6ರಂದು ತಹಸೀಲ್ದಾರ್ ಪ್ರೀತಂ ನಕಲಾಪುರೆ, ಜಿಲ್ಲಾಧಿಕಾರಿ ಎನ್.ಜಯರಾಂ ಸೇರಿದಂತೆ ಇನ್ನಿತರರು ಇವರೊಂದಿಗೆ ಶಾಮೀಲಾಗಿ ಈ ಭೂಮಿ ಕಬಳಿಕೆ ನಡೆಸಿದ್ದಾರೆ ಎಂದು ದೂರಿದರು. ಈ ಎಲ್ಲ ಅಕ್ರಮವನ್ನು ಬಯಲಿಗೆಳೆದಿರುವುದರಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಒಂದು ತಿಂಗಳೊಳಗೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು. ಒಂದು ವೇಳೆ ಯಾವುದೇ ಉತ್ತರ ನೀಡದಿದ್ದರೆ ಅದನ್ನೇ ಅನುಮತಿ ಎಂದು ಭಾವಿಸಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin