ಹಾಸನದಲ್ಲಿ ಲಕ್ಷಾಂತರ ಹಳೆ ನೋಟುಗಳಿಗೆ ಬೆಂಕಿ…!

ಈ ಸುದ್ದಿಯನ್ನು ಶೇರ್ ಮಾಡಿ

Notes

ಹಾಸನ, ಡಿ.10– ಹಳೆಯ 500, 1000ರೂ. ನೋಟುಗಳನ್ನು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಕಪ್ಪು ಕುಬೇರರು ನೋಟು ಚಲಾವಣೆ ಮಾಡದೆ ಇಲ್ಲಿನ ಸಂತೆಪೇಟೆಯಲ್ಲಿ ಲಕ್ಷಾಂತರ ನೋಟುಗಳಿಗೆ ಬೆಂಕಿ ಇಟ್ಟಿದ್ದಾರೆ.  ಅಪಾರ ಪ್ರಮಾಣದ ನೋಟುಗಳು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ಕಂಡು ಬೆಂಕಿ ನಂದಿಸಿ ನೋಟುಗಳನ್ನು ಎತ್ತಿಕೊಳ್ಳಲು ಜನ ಮುಗಿ ಬಿದ್ದಿರುವ ಘಟನೆ ನಡೆದಿದೆ. ಕಸದ ರಾಶಿ ಜತೆ ನೋಟುಗಳನ್ನು ಹಾಕಿ ಕಾಳಧನಿಕರು ಬೆಂಕಿ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಕಣ್ಣೆದುರೇ ನೋಟುಗಳು ಸುಡುತ್ತಿರುವುದನ್ನು ಕಂಡು ಬೆಂಕಿ ನಂದಿಸಿ ಸಿಕ್ಕಷ್ಟು ನೋಟುಗಳನ್ನು ಎತ್ತಿಕೊಳ್ಳಲು ಜನ ಪ್ರಯತ್ನಿಸುತ್ತಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin