ಪ್ರತಿ ಹಣ್ಣಿನಲ್ಲೂ ಇದೆ ಆರೋಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Fruits

ನಿಸರ್ಗದ ಹಲವಾರು ವೈವಿಧ್ಯಗಳಲ್ಲಿ ಹಣ್ಣುಗಳಿಗೆ ವಿಶಿಷ್ಟ ಸ್ಥಾನ. ತನ್ನ ಗುಣದಿಂದ ಹಲವಾರು ರೋಗಗಳಿಗೆ ರಾಮಬಾಣವಾಗಬಲ್ಲ ಹಣ್ಣುಗಳು ನಿಸರ್ಗದ ಅದ್ಭುತ ಕೊಡುಗೆಗಳೇ ಸರಿ. ಆಕರ್ಷಕ ಬಣ್ಣ ಹಾಗೂ ಸ್ವಾದದಿಂದ ಎಲ್ಲರನ್ನೂ ಸೆಳೆಯುವ ಹಣ್ಣುಗಳು ಆರೋಗ್ಯ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ.   ಪ್ರತಿದಿನ ಹಣ್ಣುಗಳ ಸೇವನೆಯಿಂದ ಬಹಳ ಉಪಯೋಗವಿದ್ದು, ಈ ಬಗ್ಗೆ ತಿಳಿದು ಬಳಕೆ ಮಾಡುವುದರಿಂದ ಆರೋಗ್ಯ ವೃದ್ಧಿಯೊಂದಿಗೆ ಸಾಕಷ್ಟು ಸಮಸ್ಯೆಗಳನ್ನು ದೂರ ಮಾಡಬಹುದು.

 • ಹೃದಯಕ್ಕೆ ಸಂಬಂಧಿಸಿದ ರೋಗಗಳಿಂದ ದೂರವಿರಲು ಹಣ್ಣುಗಳ ಸೇವನೆ ಅತ್ಯಗತ್ಯ.
 • ಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶ ದೇಹದ ರಕ್ತದ ಒತ್ತಡ ನಿಯಂತ್ರಣಕ್ಕೆ ಬಹಳಷ್ಟು ಸಹಕಾರಿ.
 • ದೇಹಕ್ಕೆ ಜೀವಸತ್ವ, ಕಬ್ಬಿಣಾಂಶ (ಖನಿಜಾಂಶ)ಗಳನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೆ ಹಣ್ಣುಗಳು ಪೂರೈಸುತ್ತವೆ. ಈ ಪೋಷಕಾಂಶಗಳು ಮನುಷ್ಯನ ಆರೋಗ್ಯಕ್ಕೂ ಇಂಬು ನೀಡುತ್ತವೆ.
 • ಹಣ್ಣುಗಳ ಸೇವನೆಯಿಂದ ದೇಹದ ತೂಕ, ಆಕಾರದ ಮೇಲೆ ನಿಯಂತ್ರಣ ತರಬಹುದಾಗಿದ್ದು, ಈ ಸಮಸ್ಯೆ ಎದುರಿಸುವವರು ಇದರ ಸೇವನೆಯನ್ನು ಪ್ರಮುಖವಾಗಿ ಪರಿಗಣಿಸಿದರೆ ಪರಿಹಾರ ಕಂಡುಕೊಳ್ಳಬಹುದು.
 • ಹಣ್ಣುಗಳ ಮತ್ತೊಂದು ವಿಶಿಷ್ಟ ಗುಣವೆಂದರೆ ಇದನ್ನು ನೇರವಾಗಿ ಸೇವಿಸುವುದು, ತಾಜಾ ಜ್ಯೂಸ್ ಹಾಗೂ ಒಣ ರೂಪದಲ್ಲಿಯೂ ಸೇವಿಸಬಹುದಾಗಿದ್ದು, ಅದು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ.
 • ಯಾವುದೇ ಋತುಮಾನದಲ್ಲಾದರೂ ಆಯಾ ಕಾಲದಲ್ಲಿ ಯಥೇಚ್ಚವಾಗಿ ಸಿಗುವ ಹಣ್ಣಿನ ಸೇವನೆಯಿಂದ ಚರ್ಮದ ಕಾಂತಿ, ಕೂದಲಿನ ರಕ್ಷಣೆ, ಸೌಂದರ್ಯ ವೃದ್ಧಿಗೆ ಪೂರಕ.
 • ಪ್ರತಿನಿತ್ಯ ಒಂದು ಸೇಬು ಸೇವಿಸುವುದರಿಂದ ನಮ್ಮನ್ನು ಹೃದಯದ ತೊಂದರೆಯಿಂದ ದೂರ ಇಡುತ್ತದೆ. ಇದಕ್ಕಾಗಿಯೇ ಬಹಳ ಹಿಂದಿನಿಂದ ಸೇಬು ಸೇವನೆ ಆರೋಗ್ಯದ ಮೂಲ ಎಂಬ ಮಾತು ಪ್ರಚಲಿತದಲ್ಲಿದೆ.
 • ಹಣ್ಣುಗಳು ನೈಸರ್ಗಿಕವಾಗಿ ಸಿಹಿಯಾಗಿದ್ದು, ಅದರ ಸಕ್ಕರೆಯ ಅಂಶ ದೇಹಕ್ಕೆ ಪೂರಕವಾಗಿದೆಯೇ ಹೊರತು ಯಾವುದೇ ರೀತಿಯಲ್ಲೂ ಮಾರಕವಾಗದು.
 • ಭೂಮಿಯಲ್ಲಿ ವಿವಿಧ ಬಗೆಯ ಹಣ್ಣುಗಳಿದ್ದು, ಪಪ್ಪಾಯ, ಕಿತ್ತಳೆ ಹಣ್ಣು, ನಿಂಬೆಹಣ್ಣು, ಖರ್ಬೂಜ ಒಂದು ರೀತಿಯ ಪೋಷಕಾಂಶಗಳನ್ನು ನೀಡಿದರೆ ಕಲ್ಲಂಗಡಿ, ದಾಳಿಂಬೆ, ಸೇಬು ಹಣ್ಣುಗಳು ಸಹ ವಿವಿಧ ರೀತಿಯ ಪೋಷಕಾಂಶ ಒದಗಿಸುತ್ತವೆ. ಇದರೊಂದಿಗೆ ಮಾವು, ಹಲಸು, ಸೀಬೆ, ಸಪೋಟ, ಬಾಳೆಹಣ್ಣು ಇಂತಹ ಹಲವಾರು ಹಣ್ಣುಗಳಿಂದ ಸಾಕಷ್ಟು ಲಾಭವಿದೆ.
 • ಬಹಳಷ್ಟು ಮಂದಿ ರೋಗ-ನಿರೋಧಕ ಶಕ್ತಿಯ ಕೊರತೆಯಿಂದ ಪದೇ ಪದೇ ಜ್ವರ ಮತ್ತಿತರ ಸಣ್ಣಪುಟ್ಟ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ, ನಿಯಮಿತವಾಗಿ ಹಣ್ಣಿನ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.
 • ನಿಮ್ಮ ದೇಹದ ಆಯಾಸವನ್ನು ಕಡಿಮೆ ಮಾಡಲು ಹಣ್ಣುಗಳು ಸಹಕಾರಿ. ಹಾಗೆಯೇ ಉತ್ಸಾಹ ಉಂಟುಮಾಡಿ ನವ ಚೈತನ್ಯ ತುಂಬುತ್ತದೆ.
 • ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣ ನೀರಿನಂಶವಿರುವುದರಿಂದ ಅದರಿಂದ ದೇಹಕ್ಕೆ ಅಗತ್ಯವಿರುವ ನೀರಿನಂಶ ಪೂರೈಕೆಯಾಗಿ ನಿರ್ಜಲೀಕರಣ ದಂತಹ ಸಮಸ್ಯೆಯಿಂದ ಮುಕ್ತರಾಗಬಹುದು.
 • ಮಾರುಕಟ್ಟೆ ಯಲ್ಲಿ ಕಾಲಕ್ಕೆ ತಕ್ಕಂತೆ ತಾಜಾ ಹಣ್ಣುಗಳು ಲಭ್ಯವಿದ್ದು, ಅವುಗಳನ್ನು ದಿನನಿತ್ಯ ಆಹಾರದಲ್ಲಿ ಬಳಸಿಕೊಳ್ಳಬಹುದು. ಆರೋಗ್ಯವನ್ನು ವೃದ್ಧಿಸಿ ಕೊಳ್ಳಬಹುದು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin