ಶ್ರೀಲಂಕಾ ನೌಕಾಪಡೆ ದಾಳಿಗೆ ಹಲವಾರು ತಮಿಳು ಬೆಸ್ತರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Tamilnadu

ರಾಮೇಶ್ವರಂ, ಡಿ.11- ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ನಡೆಸಿದರೆನ್ನಲಾದ ದಾಳಿಯಲ್ಲಿ ತಮಿಳುನಾಡಿನ ಅನೇಕ ಮೀನುಗಾರರು ಗಾಯಗೊಂಡಿರುವ ಘಟನೆ ನೆಡುನ್‍ತೀವು ಕರಾವಳಿ ಪ್ರದೇಶದಲ್ಲಿ ಜರುಗಿದೆ.  ಈ ಪ್ರದೇಶದಲ್ಲಿ ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ಎಂಟು ಬೆಸ್ತರು ನಿನ್ನೆ ಸಂಜೆ ಮೀನುಗಾರಿಕೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಶ್ರೀಲಂಕಾ ನೌಕಾಪಡೆಯು ಸಿಬ್ಬಂದಿ ಕಬ್ಬಿಣದ ಸರಳು ಮತ್ತು ಸರಪಳಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶೇಖರ್ ತಿಳಸಿದ್ದಾರೆ.  ಗಾಯಾಳು ಬೆಸ್ತರನ್ನು ರಾಮೇಶ್ವರಂ ಜಿಲ್ಲೆಯ ಮನಲ್‍ಮೇಲ್‍ಕುಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ಮತ್ತು ಶ್ರೀಲಂಕಾ ಜಲಗಡಿ ಸಮೀಪ ಮೀನುಗಾರರ ಮೇಲೆ ಶ್ರೀಲಂಕಾ ಕರಾವಳಿ ಪಡೆ ದಾಳಿ ಮಾಡುತ್ತಿರುವ ಪ್ರಕರಣಗಳು ಆಗಾಗ ನಡೆಯುತ್ತಿದ್ದು, ಕರಾವಳಿ ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin