ನೋಟಿಗಾಗಿ ಮುಂದುವರಿದ ಪರದಾಟ : ಎಟಿಎಂಗಳ ಮುಂದೆ ರಾರಾಜಿಸುತ್ತಿವೆ ‘No Cash’ ಬೋರ್ಡ್’ಗಳು

ಈ ಸುದ್ದಿಯನ್ನು ಶೇರ್ ಮಾಡಿ

Syndicate-Bank-Notes

ಬೆಂಗಳೂರು, ಡಿ.12- ಹಣಕ್ಕಾಗಿ ಇಂದೂ ಮುಂದುವರಿದ ಪರದಾಟ… ಎಟಿಎಂಗಳ ಮುಂದೆ ನೋ ಕ್ಯಾಷ್… ಬ್ಯಾಂಕ್‍ಗಳ ಮುಂದೆ ಸಾಲುಗಟ್ಟಿ ನಿಂತ ಜನ… ಹಣ ಸಿಗದೆ ಪರಿತಪಿಸುತ್ತಿರುವ ಸಾರ್ವಜನಿಕರು… ವ್ಯಾಪಾರ-ವಹಿವಾಟಿಗಾಗಿ ಹಣ ಪಡೆಯಲು ಹರಸಾಹಸ ಪಡುತ್ತಿರುವ ಜನರು… ದಿನನಿತ್ಯದ ಕೂಲಿ ಹಣವನ್ನು ಪಡೆಯಲು ಹೆಣಗಾಡುತ್ತಿರುವ ಕಾರ್ಮಿಕರು… ಸಂಬಳ ಪಡೆಯಲು ಸಾಧ್ಯವಾಗದೆ ಗೊಣಗುತ್ತಲೇ ಡ್ಯೂಟಿಗೆ ತೆರಳುತ್ತಿರುವ ನೌಕರರು… ಇದು ನಗರದಲ್ಲಿ ಕಂಡುಬಂದ ದೃಶ್ಯಗಳು…500, 1000ರೂ. ಮುಖಬೆಲೆಯ ನೋಟು ನಿಷೇಧ ಮಾಡಿ ಬರೋಬ್ಬರಿ 34 ದಿನಗಳು ಕಳೆದಿವೆ. ಇನ್ನೂ ಜನರ ಹೆಣಗಾಟ ತಪ್ಪಿಲ್ಲ. ಹಣ ಸಿಗದೆ ಒದ್ದಾಡುತ್ತಿದ್ದಾರೆ. ತಮಗೆ ಬೇಕಾದ ಹಣ ಪಡೆಯಲು ಎಟಿಎಂಗಳಿಗೆ ಮುಗಿ ಬಿದ್ದಿದ್ದಾರೆ.

ಎಟಿಎಂಗಳಲ್ಲಿ ಸಿಗುತ್ತಿರುವುದು ಕೇವಲ 2000ರೂ. ಬ್ಯಾಂಕ್‍ಗಳಲ್ಲಿ ವಿತ್‍ಡ್ರಾ ಮಾಡಿಕೊಳ್ಳಲು ಹೋದರೆ ಅಲ್ಲೂ ಅಗತ್ಯ ಹಣ ಸಿಗುತ್ತಿಲ್ಲ. ಇನ್ನೂ ಎಷ್ಟು ದಿವಸ ಈ ಸಂಕಷ್ಟ ಅನುಭವಿಸಬೇಕು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಬೆಂಗಳೂರಿನ ಬಹುತೇಕ ಎಟಿಎಂಗಳ ಮುಂದೆ ನೋ ಕ್ಯಾಷ್ ಬೋರ್ಡ್ ರಾರಾಜಿಸುತ್ತಿದೆ. ಇರುವ ಎಟಿಎಂಗಳಲ್ಲಿ ಅರ್ಧಗಂಟೆಗೆ ಹಣ ಖಾಲಿಯಾಗುತ್ತಿದೆ. 20 ಸಾವಿರ ಹಣ ಪಡೆಯಲು ತಮ್ಮ ಕೆಲಸ ಬಿಟ್ಟು ಜನ ಹತ್ತಾರು ಎಟಿಎಂಗಳಿಗೆ ಅಲೆಯಬೇಕಾಗಿದೆ. ಕ್ಯಾಷ್‍ಲೆಸ್ ವ್ಯವಹಾರ ಮಾಡಿ ಎಂದು ಹೇಳುತ್ತಾರೆ. ಸಣ್ಣಪುಟ್ಟ ವ್ಯವಹಾರಗಳಿಗೂ ಎಟಿಎಂ ಬಳಸಲು ಸಾಧ್ಯವೇ..? ಈ ತಕ್ಷಣಕ್ಕೆ ನೆಟ್‍ಬ್ಯಾಂಕಿಂಗ್ ಮಾಡಿಕೊಳ್ಳಲು ಆಗುತ್ತದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin