ಮಗುವಿನ ಡೈಪರ್‍ಗಳಲ್ಲಿತ್ತು 16 ಚಿನ್ನದ ಬಿಸ್ಕತ್’ಗಳು .!

ಈ ಸುದ್ದಿಯನ್ನು ಶೇರ್ ಮಾಡಿ

diapers

ನವದೆಹಲಿ,ಡಿ.12-ಮಗುವಿನ ಡಯಾಪರ್‍ಗಳಲ್ಲಿ ಬಚ್ಚಿಟ್ಟಿದ್ದ 16 ಚಿನ್ನದ ಬಿಸ್ಕತ್‍ಗಳನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ. ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಗುಂಪೊಂದನ್ನು ಭದ್ರತಾ ಪಡೆಗಳು ಅನುಮಾನದ ಮೇರೆಗೆ ಪರಿಶೀಲಿಸಿದಾಗ ಮಗುವಿನ ಡಯಾಪರ್‍ಗಳಲ್ಲಿ ಅಡಗಿಸಿದ್ದ 16 ಚಿನ್ನದ ಬಿಸ್ಕತ್‍ಗಳು ಪತ್ತೆಯಾಗಿದೆ. ಬಂಧಿತರನ್ನು ಸೀಮಾಶುಲ್ಕ ಅಧಿಕಾರಿಗಳು(ಕಸ್ಟಮ್ಸ್) ವಿಚಾರಣೆಗೊಳಪಡಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin