ಮೇಟಿ ಮೇಲಿನ ಆರೋಪ ನಂಬಲು ಅಸಾಧ್ಯ : ಕಾಗೋಡು ತಿಮ್ಮಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

kagodu

ಬೆಂಗಳೂರು, ಡಿ.12-ಸಚಿವ ಎಚ್.ವೈ.ಮೇಟಿ ಅವರ ಮೇಲೆ ಬಂದಿರುವ ಆರೋಪ ನಂಬಲು ಸಾಧ್ಯವಿಲ್ಲದಂತಹದು. ಅವರಿಂದ ಇಂತಹದನ್ನು ನಿರೀಕ್ಷಿಸಲೂ ಆಗುವುದಿಲ್ಲ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಆರ್‍ಟಿಐನಿಂದಾಗಿ ಬ್ಲ್ಯಾಕ್‍ಮೇಲ್ ನಡೆಯುವುದಾಗಿ ಹೆಚ್ಚಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳಲ್ಲಿ ಆರ್‍ಟಿಐ ಕಾರ್ಯಕರ್ತರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಿದೆ ಮೇಟಿ ಅವರು ವಯಸ್ಸಾದ ವ್ಯಕ್ತಿ. ಇಂತಹದನ್ನು ನಿರೀಕ್ಷೆ ಮಾಡಲಾಗುವುದಿಲ್ಲ ಎಂದರು.ಇಂದಿನ ದಿನಗಳಲ್ಲಿ ರಾಜಕಾರಣ ಹಾಗೂ ವ್ಯವಸ್ಥೆಗಳು ಕಲುಷಿತವಾಗುತ್ತಿದೆ. ಸ್ವಚ್ಛ ಮಾಡಲು ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಈ ರಾಜಕಾರಣವೇ ಸಾಕು ಎನಿಸಿದೆ. ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಿಸಿದರು.

ಇಂದಿನ ರಾಜಕೀಯದಲ್ಲಿ ನಮ್ಮ ತತ್ವಸಿದ್ಧಾಂತಗಳು ಹೊಂದುವುದಿಲ್ಲ. ಹಾಗಾಗಿ ಸಾಕಷ್ಟು ನೋವುಂಟಾಗುತ್ತದೆ. ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದರ ನಡುವೆ ಕಾರ್ಯನಿರ್ವಹಿಸುವ ಸಂದಿಗ್ಧತೆ ಇದೆ ಎಂದು ಹೇಳಿದರು.ಜನಾರ್ಧನ ರೆಡ್ಡಿ ಅವರ ಕಪ್ಪು ಹಣ ಬಿಳಿ ಮಾಡಿರುವ ಆರೋಪ ಹೊತ್ತಿರುವ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ಬಗ್ಗೆ ವರದಿ ಕೇಳಿದ್ದೇವೆ. ವರದಿ ಬಂದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.ತಮಿಳುನಾಡಿನಲ್ಲಿ ಅಪ್ಪಳಿಸಿರುವ ವಾರ್ಧಾಹ್ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಮಳೆ ಬಂದರೆ ನಾವುಕೊಡೆ ಹಿಡಿಯಲು ಸಾಧ್ಯವಿಲ್ಲ. ನೆರೆ ಬಂದರೆ ತಡೆಯಲೂ ಸಾಧ್ಯವಿಲ್ಲ. ಆದರೆ ಅನಾಹುತವಾಗುವುದನ್ನು ಮೊದಲೇ ಅರಿತು ಮುಂಜಾಗ್ರತೆ ತೆಗೆದುಕೊಳ್ಳಬಹುದು. ಅದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin