ರಾಜ್ಯದಲ್ಲಿ 2 ಕಡೆ ದಾಖಲೆ ಇಲ್ಲದ 28 ಲಕ್ಷ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

black-money-1

ಚಿತ್ರದುರ್ಗ/ವಿಜಯಪುರ, ಡಿ.12-ರಾಜ್ಯದಲ್ಲಿ ಪೊಲೀಸರು ಇಂದು 2 ಕಡೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ದಾಖಲೆ ಇಲ್ಲದ ಒಟ್ಟು 28 ಲಕ್ಷ ರೂ. ನಗದು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಚಿತ್ರದುರ್ಗ ವರದಿ:

ನೋಟು ವಿನಿಮಯ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಚಿತ್ರದುರ್ಗ ನಗರ ಪೊಲೀಸರು ಅವನಿಂದ ದಾಖಲೆ ಇಲ್ಲದ 11, 95,900 ರೂ. ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇವನ ಬಳಿ 100 ರೂ. ಹಾಗೂ 2000 ರೂ. ಮುಖಬೆಲೆಯ ನೋಟುಗಳು ದೊರೆತಿವೆ. ಅವನ ಜೊತೆಯಲ್ಲಿದ್ದ ಇನ್ನಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.   ತುಮಕೂರು ಜಿಲ್ಲೆ ತಿಪಟೂರು ನಿವಾಸಿ ನಾಗೇಶ್ ಒಬ್ಬ ಖೋವಾ ವ್ಯಾಪಾರಿ ಎಂದು ಹೇಳಲಾಗಿದೆ. ಇವನು ತಮಿಳುನಾಡಿನಿಂದ ಸಾರಾಸಗಟು ಖೋವಾ ತರಿಸಿ ಚಿತ್ರದುರ್ಗದ ಹಲವು ಬೇಕರಿಗಳಿಗೆ ಕೊಡುತ್ತಿದ್ದ.  ನೋಟು ನಿಷೇಧದ ನಂತರ ನಾಗೇಶ್ ಹೊಸ ನೋಟಿಗೆ ಹಳೆ ನೋಟು ವಿನಿಮಯ ಮಾಡಿಕೊಳ್ಳುವ ದಂಧೆಗೆ ಇಳಿದಿದ್ದ.
ವಿಜಯಪುರ ವರದಿ:
ವಿಜಯಪುರ ನಗರದಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 16,80,000 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಹಣ 2000 ಮುಖಬೆಲೆಯ ಹೊಸ ನೋಟುಗಳಲ್ಲಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನದ ನಂತರ ಪೊಲೀಸರು ಹಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin