ಆಲಿಕುಂಟೆಯಲ್ಲಿ ಜಾರಿ ಬಿದ್ದು ಯವಕ ಸಾವು : ಅಗ್ನಿಶಾಮಕ ಸತತ ಪ್ರಯುತ್ನದ ಫಲ ಶವಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

cmy
ಚಿಂತಾಮಣಿ, ಡಿ.12-ಸ್ನೇಹಿತರ ಜೊತೆ ಮುಖ ತೊಳೆದು ಸ್ನಾನ ಮಾಡಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಆಲಿಕುಂಟೆಯಲ್ಲಿ ನಡೆದಿದೆ.ಮೃತ ಯುವಕನನ್ನು ಬೆಂಗಳೂರು ಶಿವಾಜಿನಗರದ ಡಿ.ಜೆ.ಹಳ್ಳಿಯ ನಿವಾಸಿ ವಾಸಿಬ್ (21) ಎಂದು ಗುರುತಿಸಲಾಗಿದೆ. ಮರುಗಮಲ್ಲಾ ಗ್ರಾಮದದಲ್ಲಿ ಡಿಸೆಂಬರ್ 13 ಮತ್ತು 14 ರಂದು ನಡೆಯುವ ಅಮ್ಮಾಜಾನ್ ಭಾವಾಜಾನ್ ದರ್ಗಾದ ಉರುಸ್ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭಕ್ತರು ಎರಡು ದಿನಗಳ ಕಾಲ ಬರುವುದರಿಂದ ಹೋಟೆಲ್‍ವೊಂದರಲ್ಲಿ ಚಪಾತಿ, ಪರೋಟ ತಯಾರಿ ಮಾಡಲು ಹೋಟೆಲ್ ಮಾಲೀಕರೊಬ್ಬರು ವಾಸಿಬ್‍ನ್ನು ಕೂಲಿಗಾಗಿ ಕರೆತಂದಿದ್ದರು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ತನ್ನ ಸ್ನೇಹಿತರಾದ ಇಬ್ರಾಹಿಂ, ವಾಸೀಮ್ ಮತ್ತು ಸಲ್ಮಾನ್ ಎಂಬುವರ ಜೊತೆ ಮುಖ ತೊಳೆದುಕೊಂಡು ಸ್ನಾನ ಮಾಡಲು ವಾಸಿಬ್ ಆಲಿಕುಂಟೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ವಾಸಿಬ್ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ ಇವನನ್ನು ಮೇಲಕ್ಕೆ ಎತ್ತಲು ಈಜು ಬಾರದ ಸ್ನೇಹಿತರು ಪ್ರಯತ್ನಿಸಿ ವಿಫಲರಾಗಿದ್ದಾರೆ.

 

ಗ್ರಾಮಸ್ಥರು ಹಾಗೂ ಹೋಟೆಲ್ ಮಾಲೀಕ ಸ್ಥಳಕ್ಕೆ ವಿಷಯ ತಿಳಿದು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಸ್ಥಳಕ್ಕೆ ಆಗಮಿಸಿದ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಶವದ ಪತ್ತೆಗಾಗಿ ಅಗ್ನಿಶಾಮಕ ದಳವನ್ನು ಕರೆಸಿದ್ದು ಅವರು ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆವಿಗೂ ಕಾರ್ಯಾಚರಣೆ ನಡೆಸಿದ ನಂತರ ಸಂಜೆ ಸುಮಾರು 4-30ರಲ್ಲಿ ಶವ ಸಿಕ್ಕಿದೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮೃತನ ತಂದೆ ಮುಷ್ಟಾಕ್ ರವರಿಗೆ ಶವವನ್ನು ಒಪ್ಪಿಸಿದ್ದಾರೆ. ಇಂತಹ ಘಟನೆಗಳು ಅಲ್ಲಿ ಮರುಕಳಿಸುತ್ತಿದ್ದು ಅವುಗಳನ್ನು ತಡೆಯಲು ಸಂಬಂಧಪಟ್ಟವರು ಅತ್ತ ಗಮನಹರಿಸಿ ಸೂಕ್ತ ಬಂದೋಬಸ್ತ್ ಕ್ರಮ ಕೈಗೊಳ್ಳಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin