ದತ್ತಪೀಠ ವಿವಾದ ಇತ್ಯರ್ಥಕ್ಕೆ ಮುಂದಾಗದ ರಾಜ್ಯ ಸರ್ಕಾರ : ಶಾಸಕ ರವಿ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ct--ravi

ಚಿಕ್ಕಮಗಳೂರು,ಡಿ.12-ದತ್ತಪೀಠ ವಿವಾದವನ್ನು ತಾನೇ ಬಗೆಹರಿಸುವುದಾಗಿ ರಾಜ್ಯ ಸರ್ಕಾರವು ಈ ಹಿಂದೆ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿತ್ತು. ಆದರೆ ಎರಡು ವರ್ಷಗಳು ಕಳೆದರೂ ಸರ್ಕಾರ ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಶಾಸಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ದಾಖಲೆಗಳನ್ನು ಪರಿಶೀಲಿಸಿ ಅದರಂತೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಾರದ ರೀತಿ ವಿವಾದವನ್ನು ಬಗೆಹರಿಸಿ ಮುಸ್ಲಿಂ ಸಮುದಾಯದವರಿಗೆ ವ್ಯವಸ್ಥೆ ಮಾಡಿ ಕೊಡಲಿ ಎಂದು ಶಾಸಕರು ಸಲಹೆ ಮಾಡಿದರು. ದತ್ತ ಜಯಂತಿ 2ನೇ ದಿನವಾದ ಇಂದು ಭಿಕ್ಷಾಟನೆ ನಡೆಸಿದ ಸಿ.ಟಿ.ರವಿ ಅದರಲ್ಲಿ ಬಂದ ಅಕ್ಕಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಇರುಮುಡಿ ಕಟ್ಟಿಕೊಂಡು ದತ್ತಪೀಠಕ್ಕೆ ತೆರಳುವ ಸಂದರ್ಭ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ಇಲ್ಲಿಗೆ ಆಗಮಿಸಿ ದತ್ತಮಾಲೆ ಧರಿಸಲಿದ್ದಾರೆ. 2005ರಲ್ಲಿ ಕೂಡ ಯಡಿಯೂರಪ್ಪನವರು ಮಾಲೆ ಧರಿಸಿದ್ದರು. ಆದರೆ ಅಂದಿನ ಸರ್ಕಾರ ಬೆಟ್ಟಕ್ಕೆ ಹೋಗಲು ಅವಕಾಶ ನೀಡದೆ ಅವರನ್ನು ಬಂಧಿಸಿತ್ತು. ನಂತರ ಮುಖ್ಯಮಂತ್ರಿಯಾದ ಅವರು ಕೆಲಸ ಕಾರ್ಯಗಳ ಒತ್ತಡದಿಂದ ಮಾಲೆ ಧರಿಸಲಾಗಿರಲಿಲ್ಲ. ಹಾಗಾಗಿ ಈ ಬಾರಿ ಧರಿಸಲಿದ್ದಾರೆ ಎಂದು ಶಾಸಕ ರವಿ ತಿಳಿಸಿದರು. ನಗರದ ಕಾಮಧೇನು ಗಣಪತಿ ದೇವಸ್ಥಾನದಿಂದ ಶೋಭಾಯಾತ್ರೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಭಜರಂಗದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಭಾಗವಹಿಸಿದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin