ದಾಖಲೆ ಇಲ್ಲದ 12 ಲಕ್ಷ ರೂ. ವಶ ಒಬ್ಬನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

chitra-durga

ಚಿತ್ರದುರ್ಗ,ಡಿ.12-ನೋಟು ವಿನಿಮಯ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಚಿತ್ರದುರ್ಗ ನಗರ ಪೊಲೀಸರು ಅವನಿಂದ 11, 95,900 ರೂ. ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇವನ ಬಳಿ 100 ರೂ. ಹಾಗೂ 2000 ರೂ. ಮುಖಬೆಲೆಯ ನೋಟುಗಳು ದೊರೆತಿವೆ. ಈ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಅವನ ಜೊತೆಯಲ್ಲಿದ್ದ ಇನ್ನಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ನಿವಾಸಿ ನಾಗೇಶ್ ಒಬ್ಬ ಖೋವಾ ವ್ಯಾಪಾರಿ ಎಂದು ಹೇಳಲಾಗಿದೆ. ಇವನು ತಮಿಳುನಾಡಿನಿಂದ ಸಾರಾಸಗಟು ಖೋವಾ ತರಿಸಿ ಚಿತ್ರದುರ್ಗದ ಹಲವು ಬೇಕರಿಗಳಿಗೆ ಕೊಡುತ್ತಿದ್ದ.
ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಕಮೀಷನ್ ಆಸೆಗೆ ಬಿದ್ದ ನಾಗೇಶ್ ಹೊಸ ನೋಟಿಗೆ ಹಳೆ ನೋಟು ವಿನಿಮಯ ಮಾಡಿಕೊಳ್ಳುವ ದಂಧೆಗೆ ಇಳಿದಿದ್ದ. ಇವನ ಬಳಿ ಇದ್ದ ಸುಮಾರು 12 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಪ್ಪಿಸಿಕೊಂಡಿರುವ ಇನ್ನಿಬ್ಬರಿಗಾಗಿ ಹುಡುಕಾಟ ನಡೆದಿದೆ. ತಮಗೆ ದೊರೆತ ಖಚಿತ ಸುಳವನ್ನಾಧರಿಸಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ ಎಎಸ್‍ಪಿ ಲಕ್ಷ್ಮಣ್ ನಿಂಬರಗಿ ಮತ್ತು ತಂಡ ನಗರದ ಒನಕೆ ಓಬವ್ವ ವೃತ್ತದ ಬಳಿ ಬೈಕ್‍ನಲ್ಲಿ ನೋಟು ಸಾಗಿಸುತ್ತಿದ್ದ ನಾಗೇಶ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin