ಮಾನವಹಕ್ಕುಗಳ ಉಲ್ಲಂಘನೆ : ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

tvrk

ತುರುವೇಕೆರೆ, ಡಿ.12- ಮಾನವ ಹಕ್ಕುಗಳ ಅರಿವಿನ ಕೊರತೆಯಿಂದಾಗಿ ಸಮಾಜದ ಪ್ರತಿ ಹಂತದಲ್ಲಿಯೂ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಾನವ ಹಕ್ಕುಗಳ ಜಾಗೃತದಳದ ತಾಲೂಕು ಅಧ್ಯಕ್ಷ ಜಗದೀಶ್ ಚಂದ್ರ ಬಾಬು ಬೇಸರ ವ್ಯಕ್ತಪಡಿಸಿದರು. ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಪಟ್ಟಣದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಹಾಗೂ ವಿವಿಧ ಸರ್ಕಾರಿ ಶಾಲೆಗಳಲ್ಲಿ ಹಾಲು ಹಣ್ಣು ವಿತರಿಸಿ ಅವರು ಮಾತನಾಡಿದರು. ಸಾರ್ವಜನಿಕರು ಮಾನವ ಹಕ್ಕುಗಳ ಬಗ್ಗೆ ಸ್ಪಷ್ಟ ಪರಿಜ್ಞಾನ ಪಡೆದರೆ ಹಕ್ಕುಗಳ ಉಲ್ಲಂಘನೆಯಾಗದಂತೆ ಪ್ರತಿಭಟಿಸುವ ಶಕ್ತಿ ಇರುತ್ತದೆ. ಇದನ್ನು ಅರಿತು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮಾನವ ಹಕ್ಕುಗಳ ಮಹತ್ವ ಮತ್ತು ಅದರ ಅಗತ್ಯತೆಯನ್ನು ಪರಿಪೂರ್ಣವಾಗಿ ಶಿಕ್ಷಕರಾದವರು ಮಕ್ಕಳ ಮನಸ್ಸಿನಲ್ಲಿ ತುಂಬುವ ಕೆಲಸ ಮಾಡವ ಅವಶ್ಯಕತೆ ಇದೆ ಎಂದರು.

ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡು ಪಠ್ಯ ಪುಸ್ತಕಗಳಲ್ಲಿ ಮಾನವ ಹಕ್ಕುಗಳು ಯಾವುವು ಮತ್ತು ಅವುಗಳನ್ನು ಹೇಗೆ ಚಲಾವಣೆ ಮಾಡಬೇಕು ಹಾಗೂ ಅವುಗಳನ್ನು ಒಂದು ವೇಳೆ ಉಲ್ಲಂಘನೆ ಮಾಡಿದ್ದಲ್ಲಿ ಶಿಕ್ಷೆಯ ಪ್ರಮಾಣವನ್ನು ಕೂಡ ನಮೂದಿಸುವುದರೊಂದಿಗೆ ಮಕ್ಕಳಲ್ಲಿ ಹೆಚ್ಚಿನ ಜಾಗೃತಿ ಮೂಡಲು ಸಹಾಯವಾಗುತ್ತದೆ ಎಂದರು. ಪಪಂ ಮಾಜಿ ಅಧ್ಯಕ್ಷೆ ನವ್ಯಪ್ರಕಾಶ್, ಸಂಘದ ಪದಧಿಕಾರಿಗಳಾದ ಸುನಿಲ್ ಶೇಖರ್, ಮಧುಸೂದನ್, ರಘುರಾಮ್, ರೂಪ, ಪ್ರಿಯ, ಸರೀತ ಮತ್ತಿತರರು ಹಾಜರಿದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin