ಯೋಧ ಮಗನನ್ನು ತಂದೆಯೇ ಗುಂಡಿಟ್ಟು ಕೊಂದ..!

ಈ ಸುದ್ದಿಯನ್ನು ಶೇರ್ ಮಾಡಿ

Eeranna-Indi-Firing
ಬೈಲಹೊಂಗಲ(ಬೆಳಗಾವಿ), ಡಿ.13-ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯೇ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ನಯಾನಗರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಈರಣ್ಣ ವಿಠ್ಠಲ ಇಂಡಿ (21) ಎಂಬುವರು ಮೃತ ಯೋಧರಾಗಿದ್ದು, ಇವರು ಬೆಂಗಳೂರಿನ ಎಂಇಸಿ ಸೆಂಟರ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಜೆ ಮೇಲೆ ಊರಿಗೆ ಬಂದಿದ್ದರು. ತಂದೆ ವಿಠ್ಠಲ್ ಎಂಬುವರೊಂದಿಗೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ಅದು ವಿಕೋಪಕ್ಕೆ ಹೋಗಿ ವಿಠ್ಠಲ್ ಮೂರು ಸುತ್ತು ಗುಂಡು ಹಾರಿಸಿದಾಗ ಸ್ಥಳದಲ್ಲಿಯೇ ಈರಣ್ಣ ಮೃತಪಟ್ಟು ಪತ್ನಿ ಅನಸೂಯ(40),ಪುತ್ರಿ ಪ್ರೀತಿ (19) ಗಂಭೀರವಾಗಿ ಗಾಯಗೊಂಡಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೈಲಹೊಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Eeranna-Indi-Firing-1

Eeranna-Indi-Firing-4

Eeranna-Indi-Firing-3

Facebook Comments

Sri Raghav

Admin