200 ಮೂಟೆ ಪಡಿತರ ಅಕ್ಕಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

Cantor

ಕುಣಿಗಲ್,ಡಿ.12-ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಕ್ಯಾಂಟರ್‍ನ್ನು ತಾಲ್ಲೂಕು ರಕ್ಷಣಾ ಅಧ್ಯಕ್ಷ ಮಂಜುನಾಥ್ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ರಾಜ್ಯ ಹೆದ್ದಾರಿ 33ರ ಕಲ್ಲು ಪಾಳ್ಯ ಗೇಟ್ ಬಳಿ ತುಮಕೂರು ಕಡೆಗೆ ತೆರಳುತ್ತಿದ್ದ ಕ್ಯಾಂಟರ್‍ನ್ನು ಅನುಮಾನಗೊಂಡ ಮಂಜುನಾಥ್ ಹಿಂಬಾಲಿಸಿ ವಾಹನವನ್ನು ತಡೆದು ವಿಚಾರಿಸಲು ಹೋದಾಗ ಚಾಲಕ ನವೀನ್ ಗಾಬರಿಗೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಾರ್ವಜನಿಕರ ಸಹಾಯದಿಂದ ಚಾಲಕನನ್ನು ಹಿಡಿದು ವಿಚಾರಿಸಿದಾಗ ಕ್ಯಾಂಟರ್‍ನಲ್ಲಿ ಪಡಿತರದಾರರಿಗೆ ವಿತರಿಸಬೇಕಾದ 200 ಚೀಲ ಅಕ್ಕಿಯನ್ನು ಸಾಗಿಸುತ್ತಿದ್ದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin