ಉತ್ತರ ಚೀನಾವನ್ನು ಉಡಾಯಿಸಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆಗೆ ಭಾರತ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Agni-5

ನವದೆಹಲಿ, ಡಿ.14-ಉತ್ತರ ಚೀನಾವನ್ನು ಧ್ವಂಸಗೊಳಿಸಬಲ್ಲ ಅಗಾಧ ಅಣು ಸಾಮಥ್ರ್ಯದ ಅಗ್ನಿ-5 ಅಂತರ್-ಖಂಡಾಂತರ ಸಿಡಿತಲೆ ಕ್ಷಿಪಣಿ (ಐಸಿಬಿಎಂ) ಉಡಾವಣೆ ಪರೀಕ್ಷೆಗೆ ಭಾರತ ಸಜ್ಜಾಗಿದೆ.  ಎರಡು ವರ್ಷಗಳಿಂದ ಇದಕ್ಕಾಗಿ ನಡೆದ ನಿರಂತರ ಸಂಶೋಧನೆ ಮತ್ತು ಪ್ರಯೋಗಗಳು ಪೂರ್ಣಗೊಂಡಿವೆ ಒಡಿಶಾದ ವೀಲ್ಹರ್ ದ್ವೀಪದಲ್ಲಿ ಡಿಸೆಂಬರ್ ಕೊನೆ ಅಥವಾ ಜನವರಿ ಮೊದಲ ವಾರ ಕ್ಷಿಪಣಿ-5 ಪರೀಕ್ಷಾರ್ಥವಾಗಿ ಉಡಾವಣೆ ಮಾಡಲು ಸಿದ್ದತೆಗಳನ್ನು ನಡೆಲಾಗುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.  ಜನವರಿ 2015ರಲ್ಲಿ ಈ ಕ್ಷಿಪಣಿಗೆ ಸಂಬಂಧಿಸಿದಂತೆ ನಡೆದ ಪರೀಕ್ಷೆಯಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದ್ದವು. ಈಗ ಎಲ್ಲ ಲೋಪದೋಷಗಳನ್ನು ನಿವಾರಿಸಲಾಗಿದ್ದು, ಪ್ರಯೋಗಾರ್ಥ ಉಡ್ಡಯನಕ್ಕೆ ಅಗ್ನಿ-5 ಸಂಪೂರ್ಣ ಸನ್ನದ್ಧವಾಗಿದೆ.

ಅಗ್ನಿ-5 ಕ್ಷಿಪಣಿಯ ಮೂರು ಹಂತಗಳಲ್ಲಿ ಇದು ಕಟ್ಟ ಕಡೆಯ ಪರೀಕ್ಷೆಯಾಗಿದೆ. ಸ್ಟ್ರಾಟಿಜಿಕ್ ಫೋರ್ಸ್ ಕಮಾಂಡ್ (ಎಸ್‍ಎಫ್‍ಸಿ) ಇದನ್ನು ಪ್ರಾಯೋಗಿಕ ಬಳಕೆಗಳಿಗೆ ಉಪಯೋಗಿಸಲು ಅರಂಭಿಸುವುದಕ್ಕೂ ಮುನ್ನ ಪೂರ್ಣ ಪ್ರಮಾಣದ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.  ಅಣ್ವಸ್ತ್ರ ಸಾಮಥ್ರ್ಯದ ಕ್ಷಿಪಣಿಗಳನ್ನು ಹೊಂದಿರುವ ಹಾಗೂ ಪರಮಾಣು ಪೂರೈಕೆ ರಾಷ್ಟ್ರಗಳ (ಎನ್‍ಎಸ್‍ಜಿ) ಸಮೂಹಕ್ಕೆ ಸೇರಲು ಭಾರತಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾಗೆ ಈ ಕ್ಷಿಪಣಿಯು ದಿಟ್ಟ ಪ್ರತ್ಯುತ್ತರವಾಗಲಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin