ಪ್ರಿಯಾಂಕ ಯುನಿಸೆಫ್ ಗ್ಲೋಬಲ್ ಗುಡ್‍ವಿಲ್ ಅಂಬಾಸಿಡರ್

ಈ ಸುದ್ದಿಯನ್ನು ಶೇರ್ ಮಾಡಿ

Priyanka

ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುತ್ತಿರುವ ಅಭಿನೇತ್ರಿ ಪ್ರಿಯಾಂಕ ಚೋಪ್ರಾ ಈಗ ವಿಶ್ವ ಮಕ್ಕಳ ಹಿತರಕ್ಷಣಾ ಸಂಸ್ಥೆಯಾದ ಯುನಿಸೆಫ್‍ನ ಹೊಸ ಜಾಗತಿಕ ಸದ್ಭಾವ ರಾಯಭಾರಿ. ಬಾಲಿವುಡ್, ಅಮೆರಿಕ ಟೆಲಿವಿಷನ್ ಮತ್ತು ಬಾಲಿವುಡ್‍ನಲ್ಲೂ ಮಿಂಚುತ್ತಿರುವ ಪಿಗ್ಗಿಯನ್ನು ವಿಶ್ವಸಂಸ್ಥೆಯ ಪ್ರಮುಖ ಅಂಗಸಂಸ್ಥೆಯಾದ ಯುನಿಸೆಫ್‍ನ ಗ್ಲೋಬಲ್ ಗುಡ್‍ವಿಲ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ವಿಶ್ವಸಂಸ್ಥೆಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪುಟ್ಬಾಲ್ ತಾರೆ ಡೇವಿಡ್ ಬೇಕಂ ಮತ್ತು 12 ವರ್ಷದ ಬ್ರಿಟಿಷ್ ಬಾಲ ನಟಿ ಮಿಲ್ಲಿ ಬೇಬಿ ಬ್ರೌನ್ ಪ್ರಿಯಾಂಕರ ಹೊಸ ಹುದ್ದೆಯನ್ನು ಘೋಷಿಸಿದರು. ಯುನಿಸೆಫ್‍ನ 70ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಪಿಸಿಗೆ ಈ ಗೌರವ ಲಭಿಸಿರುವುದು ಭಾರತಕ್ಕೂ ಹೆಮ್ಮೆಯ ಸಂಗತಿ.

ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಉನ್ನತ ರಾಜತಾಂತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಭುವನ ಸುಂದರಿ ಪ್ರಿಯಾಂಕ ಚೋಪ್ರಾ, ವಿಶ್ವದಲ್ಲಿ ಸಂಕಷ್ಟಕ್ಕೆ ಗುರಿಯಾಗಿರುವ ಮಕ್ಕಳ ಸಾಮೂಹಿಕ ಧ್ವನಿಯಾಗುವಂತೆ ವಿಶ್ವದ ರಾಷ್ಟ್ರಗಳಿಗೆ ಕರೆ ನೀಡಿದ್ದಾಳೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin