ಮೋದಿ ವೈಯಕ್ತಿಕ ಭ್ರಷ್ಟಾಚಾರ ಬ್ಲಾಸ್ಟ್ ಮಾಡುತ್ತಿದ್ದೆ ಆದರೆ ಅವಕಾಶ ನೀಡಲಿಲ್ಲ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01

ನವದೆಹಲಿ, ಡಿ.14-ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಭ್ರಷ್ಟಾಚಾರ ಹಗರಣದ ಬಗ್ಗೆ ಸಂಸತ್ತಿನಲ್ಲಿ ಬಹಿರಂಗಗೊಳಿಸುತ್ತಿದ್ದೆ . ಆದರೆ, ಅದಕ್ಕೆ ಅವಕಾಶ ಲಭಿಸಲಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಭಾರೀ ಭ್ರಷ್ಟಾಚಾರ ಹಗರಣವೊಂದರ ಬಗ್ಗೆ ನನ್ನಲ್ಲಿ ಮಾಹಿತಿ ಇದೆ. ಅದನ್ನು ಸಂಸತ್ತಿನಲ್ಲೇ ಬಹಿರಂಗಗೊಳಿಸುವುದು ನನ್ನ ಉದ್ದೇಶ. ಇದೇ ಉದ್ದೇಶದಿಂದಲೇ ಇಂದು ನಾನು ಲೋಕಸಭೆ ಕಲಾಪಕ್ಕೆ ಬಂದಿದ್ದೆ. ಆದರೆ, ಮಾತನಾಡಲು ಅವಕಾಶವಾಗಲಿಲ್ಲ ಎಂದು ಸದನದ ಕಲಾಪ ಮುಂದೂಡಿಕೆ ನಂತರ ರಾಹುಲ್ ಸಂಸತ್ ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೋದಿಯವರ ಭ್ರಷ್ಟಾಚಾರದ ಬೆಲೂನ್‍ನ ಗಾಳಿ ತೆಗೆಯುವುದು ನನ್ನ ಉದ್ದೇಶ. ನನ್ನಲ್ಲಿರುವ ಮಾಹಿತಿಯು ಮೋದಿ ಅವರ ವೈಯಕ್ತಿಕ ಮಾಹಿತಿ. ನಾನು ಚುನಾಯಿತ ಪ್ರತಿನಿಧಿ. ಹಾಗಾಗಿ ಲೋಕಸಭೆಯಲ್ಲೇ ಅದನ್ನು ತಿಳಿಸಬೇಕೆಂಬುದು ನನ್ನ ಇರಾದೆ. ನಾನು ಬಾಯ್ಬಿಟ್ಟರೆ ಪಾರ್ಲಿಮೆಂಟ್ ತಲ್ಲಣಗೊಳ್ಳುತ್ತದೆ. ಆದರೆ ಅದಕ್ಕೆ ಸೂಕ್ತ ಕಾಲಾವಕಾಶ ಕೂಡಿ ಬಂದಿಲ್ಲ ಎಂದರು ಅವರು ಹೇಳಿದರು.   ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಲು ಮತ್ತು ಚರ್ಚಿಸಲು ಅವಕಾಶ ನಿರಾಕರಿಸಲಾಗಿದೆ. ಇಂಥ ವಿದ್ಯಮಾನವನ್ನು ನಾನು ಪ್ರಥಮ ಬಾರಿಗೆ ನೋಡುತ್ತಿದ್ದೇನೆ ಎಂದು ರಾಹಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin