ದೆಹಲಿಗೆ ಹಾರಿದ ರಾಜಶೇಖರ್ : ರಾಹುಲ್‍ ಕೈಸೇರಲಿದೆಯೇ ಮೇಟಿ ಕಾಮಲೀಲೆ ಸಿಡಿ..?

ಈ ಸುದ್ದಿಯನ್ನು ಶೇರ್ ಮಾಡಿ

Rajashekhar-012
ಬಾಗಲಕೋಟೆ/ನವದೆಹಲಿ, ಡಿ.14- ತೀವ್ರ ಕುತೂಹಲ ಕೆರಳಿಸಿರುವ ಸಚಿವ ಎಚ್.ವೈ.ಮೇಟಿ ಮೇಲಿನ ರಾಸಲೀಲೆ ಆರೋಪ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.
ಈಗಾಗಲೇ ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ತಮ್ಮ ಬಳಿ ಇರುವ ದಾಖಲೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ನೀಡುವುದಾಗಿ ನಿನ್ನೆ ಸಂಜೆ ಇಲ್ಲಿಂದ ಹೊರಟಿದ್ದರು.
ಎಲ್ಲರೂ ಅವರು ಬೆಂಗಳೂರಿಗೆ ಹೋಗುತ್ತಿದ್ದಾರೆಂದು ಭಾವಿಸಿದ್ದರೆ ಅವರು ಹೊರಟಿದ್ದು ದೆಹಲಿಗೆ..! ಇಂದು ಬೆಳಗ್ಗೆ ಇಂಡಿಯಾ ಗೇಟ್ ಬಳಿ ಕೆಲ ಪತ್ರಕರ್ತರನ್ನು ಆಹ್ವಾನಿಸಿ ಇಲ್ಲಿಗೆ ಬಂದ ವಿಷಯದ ಬಗ್ಗೆ ಮಾಹಿತಿ ನೀಡುವಾಗಲೂ ಗೊಂದಲಗಳು ಸೃಷ್ಟಿಯಾಗಿದ್ದವು.

ನೀವು ಪರಮೇಶ್ವರ್ ಅವರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದ್ದಿರಿ, ಆದರೆ ಇಲ್ಲಿಗೆ ಬರಲು ಕಾರಣವೇನು..? ಸಿಡಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೇಟಿಯವರು, ನನಗೆ ಗೃಹ ಸಚಿವರು ಭೇಟಿಗೆ ಸಮಯಾವಕಾಶ ನೀಡಲಿಲ್ಲ. ಆದ ಕಾರಣ ನೇರವಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಬಳಿಯೇ ಬಂದಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಯಾವಾಗ ಸಿಡಿ ಬಿಡುಗಡೆ ಮಾಡುತ್ತೀರಿ ಎಂಬುದಕ್ಕೆ ಎಲ್ಲವನ್ನೂ ಕಾದು ನೋಡಿ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟು ಮುಂಜಾನೆಯ ವಾಕಿಂಗ್, ವ್ಯಾಯಾಮ ಮಾಡುತ್ತ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇತ್ತ ಬಾಗಲಕೋಟೆಯಲ್ಲಿ ಹೊಟ್ಟೆನೋವು ಎಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತ ಮಹಿಳೆ ಇಂದು ಮುಂಜಾನೆ 3.30ರಲ್ಲಿ ಡಿಸ್ಜಾರ್ಜ್ ಮಾಡಿಕೊಂಡು ಮನೆಗೆ ತೆರಳಿದ್ದಾರೆ.
ಇನ್ನು ಚಿತ್ರೀಕರಣ ಮಾಡಿದರೆನ್ನಲಾದ ಸುಭಾಷ್ ಕೂಡ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಅವರೆಲ್ಲಿದ್ದಾರೆ ಎಂಬುದು ಇನ್ನೂ ತಿಳಿಯದಾಗಿದೆ.
ಉತ್ತರ ಕರ್ನಾಟಕದಲ್ಲಿ ಈ ಪ್ರಕರಣ ಸಾಕಷ್ಟು ಸುದ್ದಿಯಾಗಿದ್ದು, ಪರ-ವಿರುದ್ಧದ ವಾದಗಳು ಮುಂದುವರೆದಿವೆ.  ಕುತೂಹಲವೆಂಬಂತೆ ಸಂತ್ರಸ್ತ ಮಹಿಳೆಗೆ ಪೊಲೀಸರ ಭದ್ರತೆ ಕಲ್ಪಿಸಲಾಗಿದೆ. ಒಬ್ಬ ಎಎಸ್‍ಪಿ, ಒಬ್ಬ ಡಿಸಿಪಿ, ಒಬ್ಬ ಇನ್ಸ್‍ಪೆಕ್ಟರ್, ಇಬ್ಬರು ಎಸ್‍ಐ, ನಾಲ್ಕು ಮಂದಿ ಕಾನ್ಸ್‍ಟೆಬಲ್‍ಗಳನ್ನು ನೇಮಕ ಮಾಡಲಾಗಿದ್ದು, ಕಳೆದ ರಾತ್ರಿಯಿಂದ ಅವರು ಜಿಲ್ಲಾಸ್ಪತ್ರೆಯಲ್ಲೇ ಕಾವಲು ಕಾಯುತ್ತಿದ್ದರು.

ಪತ್ರಕರ್ತರು ಹಾಗೂ ಸಂಬಂಧಿಕರು ಆಸ್ಪತ್ರೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಆದರೆ, ಮುಂಜಾನೆ ಮಹಿಳೆ ಡಿಸ್ಜಾರ್ಜ್ ಆಗಿರುವುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅವರು ಎಲ್ಲಿ ಹೋದರು ಎಂಬುದು ಬೆಳಿಗ್ಗೆವರೆಗೂ ಯಾರಿಗೂ ತಿಳಿದಿರಲಿಲ್ಲ. ಒಟ್ಟಾರೆ ಸಚಿವರ ವಿರುದ್ಧ ದೂರು ಈಗ ರಾಷ್ಟ್ರ ರಾಜಧಾನಿಯಲ್ಲಿನ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ತಲುಪುತ್ತಿರುವುದು ಎಲ್ಲರನ್ನೂ ಚಕಿತಗೊಳಿಸಿದೆ.  ನವದೆಹಲಿ ವರದಿ: ದೆಹಲಿಯಲ್ಲಿ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ಸಿಡಿ ಸಲ್ಲಿಸುವುದಾಗಿ ಹೇಳಿದ್ದ ರಾಜಶೇಕರ್ ಮಧ್ಯಾಹ್ನದವರೆಗೂ ಎಐಸಿಸಿ ಉಪಾಧ್ಯಕ್ಷರ ಭೇಟಿಗೆ ಯತ್ನಿಸಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin