ಚರಿತ್ರೆ ಸೇರಿದ 500 ಮುಖಬೆಲೆಯ ಹಳೆ ನೋಟು

ಈ ಸುದ್ದಿಯನ್ನು ಶೇರ್ ಮಾಡಿ

Notes-500-and-1000

ಬೆಂಗಳೂರು, ಡಿ.15– ಐದುನೂರು ರೂ. ನೋಟು ಇತಿಹಾಸ ಸೇರಲಿದೆ. ಪೆಟ್ರೋಲ್ ಬಂಕ್, ಆಸ್ಪತ್ರೆ ಮತ್ತಿತರ ಕಡೆ ಚಲಾವಣೆಗೆ ಅವಕಾಶ ನೀಡಿದ್ದ ದಿನ ಇಂದಿಗೆ ಅಂತ್ಯವಾಗಿದೆ.  ಇನ್ನು ಮುಂದೆ ಚರಿತ್ರೆಯಲ್ಲಿ ದಾಖಲಾಗಲಿದೆ. ಸಾರ್ವಜನಿಕರು ತಮ್ಮಲ್ಲಿರುವ 500ರೂ. ನೋಟುಗಳನ್ನು ಬ್ಯಾಂಕ್‍ನಲ್ಲಿ ಮಾತ್ರ ಡಿಪಾಸಿಟ್ ಮಾಡಲು ಅವಕಾಶವಿದೆ. ಅದೂ ಡಿ.30ರೊಳಗೆ. ತಮ್ಮಲ್ಲಿರುವ ಎಲ್ಲ 500ರೂ. ನೋಟುಗಳನ್ನು ಬ್ಯಾಂಕ್‍ಗಳಿಗೆ ಜಮಾ ಮಾಡಬಹುದಾಗಿದೆ. ಅದನ್ನು ಹೊರತುಪಡಿಸಿದರೆ ಆ ನೊಟಿಗೆ ಯಾವುದೇ ಮೌಲ್ಯ ಇರುವುದಿಲ್ಲ.

1000ರೂ. ಮುಖಬೆಲೆಯ ನೋಟುಗಳನ್ನು ಕೂಡ ಕಳೆದ ವಾರದ ಹಿಂದೆಯೇ ಆರ್‍ಬಿಐ ಚಲಾವಣೆಯನ್ನು ರದ್ದುಗೊಳಿಸಿತ್ತು. ಆ ನೋಟುಗಳನ್ನು ಈಗ ಬ್ಯಾಂಕ್‍ಗೆ ಮಾತ್ರ ಹಾಕಬಹುದಾಗಿದೆ. ಡಿ.30ರೊಳಗೆ 500, 1000ರೂ. ಮುಖಬೆಲೆಯ ನೋಟುಗಳು ಬ್ಯಾಂಕ್ ತಲುಪಿದರೆ ಸೇಫ್. ಇಲ್ಲದಿದ್ದರೆ ವೇಸ್ಟ್. ಕಳೆದ ನ.8ರಂದು ಪ್ರಧಾನಿ ನರೇಂದ್ರಮೋದಿಯವರು 500, 1000ರೂ. ಮುಖಬೆಲೆಯ ನೋಟು ರದ್ದುಗೊಳಿಸಿ ಆದೇಶ ನೀಡಿದ ನಂತರ ಲಕ್ಷಾಂತರ ಕೋಟಿ ಹಣ ಬ್ಯಾಂಕ್‍ಗೆ ಹರಿದುಬಂದಿತ್ತು.

ಇನ್ನೂ ಕೆಲವರು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನ ಮಾಡಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಸಾವಿರಾರು ಕೋಟಿ ರೂ. ಕಪ್ಪು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ನಡುವೆ ಸಾರ್ವಜನಿಕರು ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ವೇಸ್ಟ್ ಮಾಡಿಕೊಳ್ಳದೆ ಬ್ಯಾಂಕ್‍ಗೆ ಡಿಪಾಸಿಟ್ ಮಾಡಿ ಉಳಿಸಿಕೊಳ್ಳಿ.

Eesanje News App

Facebook Comments

Sri Raghav

Admin