‘ಟು ಸರ್ ವಿತ್ ಲವ್’ ಖ್ಯಾತಿಯ ಲೇಖಕ ಬೇತ್‍ವೇಟ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

To-Sir,-With-Love

ನ್ಯೂಯಾರ್ಕ್, ಡಿ.15-ಟು ಸರ್ ವಿತ್ ಲವ್ ಕಾದಂಬರಿ ಮೂಲಕ ವಿಶ್ವವಿಖ್ಯಾತರಾಗಿದ್ದ ಕಾದಂಬರಿಕಾರ, ಲೇಖಕ, ಬರಹಗಾರ, ಶಿಕ್ಷಣ ತಜ್ಞ ಮತ್ತು ರಾಜತಂತ್ರಜ್ಞ ಗಯಾನಾ ಮೂಲದ ಇ.ಆರ್.ಬ್ರೇತ್‍ವೇಟ್ ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು. ಬ್ರೇತ್‍ವೇಟ್ ಕಳೆದ ಸೋಮವಾರ ಅಸ್ವಸ್ಥರಾಗಿ ಮೇರಿಲ್ಯಾಂಡ್‍ನ ರಾಕ್‍ವಿಲ್ಲೆಯಲ್ಲಿರುವ ಅಡ್ವೆಂಟಿಸ್ಟ್ ಹೆಲ್ತ್ ಕೇರ್ ಶೇಡಿ ಗ್ರೂಪ್ ಮೆಡಿಕಲ್ ಸೆಂಟರ್‍ಗೆ ದಾಖಲಾಗಿದ್ದರು. ಅವರು ನಿನ್ನೆ ಕೊನೆಯುಸಿರೆಳೆದರು ಎಂದು ಅವರ ನಿಕಟವರ್ತಿ ಜಿನೆಟ್ ಆಸ್ಟ್ ತಿಳಿಸಿದ್ದಾರೆ.  1959ರಲ್ಲಿ ಇವರು ಮೊಟ್ಟಮೊದಲು ಬರೆದಿದ್ದ ಟು ಸರ್ ವಿತ್ ಲವ್ ಕಾದಂಬರಿ ಅಂತಾರಾಷ್ಟ್ರೀಯ ಬೆಸ್ಟ್ ಸೆಲ್ಲರ್ ಪುಸ್ತಕವಾಗಿ ಲೋಕಪ್ರಿಯವಾಗಿತ್ತು. ಇದೇ ಜನಪ್ರಿಯ ಕೃತಿ ಆಧರಿಸಿ ಸಿಡ್ನಿ ಪಾಯ್‍ಟರ್ ಚಲನಚಿತ್ರ ಟು ಸರ್ ವಿತ್ ಲವ್ ಸೂಪರ್ ಹಿಟ್ ಆಗಿತ್ತು. ಅಲ್ಲದೇ ವಿವಿಧ ಭಾಷೆಗಳಲ್ಲೂ (ಹಿಂದಿಯಲ್ಲಿ ಹಿಪ್ ಹಿಪ್ ಹುರ್ರೇ) ಸಿನಿಮಾ ನಿರ್ಮಾಣಕ್ಕೆ ಸ್ಫೂರ್ತಿಯಾಯಿತು.

ಗಯಾನಾ, ಅಮೆರಿಕ ಮತ್ತು ಬ್ರಿಟನ್‍ನಲ್ಲಿ ಶಿಕ್ಷಣ ಪಡೆದ ಬ್ರೇತ್‍ವೇಟ್ ಅನೇಕ ಕಾದಂಬರಿಗಳನ್ನು, ಕಥೆಗಳನ್ನು, ಕಥೇತರ ಪುಸ್ತಕಗಳನ್ನು ಬರೆದಿದ್ದಾರೆ. ಲಂಡನ್ ಈಸ್ಟ್ ಎಂಡ್ ಕೊಳಗೇರಿಯಲ್ಲಿ ಅನೇಕ ವರ್ಷಗಳ ಕಾಲ ಶಿಕ್ಷಕರಾಗಿ ದುಡಿದಿದ್ದ ಇ ಆರ್ ಬ್ರೇತ್‍ವೇಟ್ ಕೊಳಗೇರಿಯ ಪ್ರತಿಭಾವಂತರ ಅಭ್ಯುದಯಕ್ಕೆ ದಾರಿದೀಪವಾಗಿದ್ದರು.  ಬ್ರೇತ್‍ವೇಟ್ ಉತ್ತಮ ರಾಜತಂತ್ರಜ್ಞ ಮತ್ತು ಗಯಾನಕ್ಕೆ ಕೀರ್ತಿ ತಂದ ಮಹಾ ವ್ಯಕ್ತಿ ಎಂದು ಆ ದೇಶದ ಅಧ್ಯಕ್ಷ ಡೇವಿಡ್ ಗ್ರ್ಯಾಂಗರ್ ಸ್ಮರಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin