ಬ್ಯಾನ್ ಆದ 500 ಮುಖಬೆಲೆಯ ನೋಟಿನ ಚಲಾವಣೆಗೆ ಇಂದೇ ಕೊನೆ ದಿನ..!

ಈ ಸುದ್ದಿಯನ್ನು ಶೇರ್ ಮಾಡಿ

500-Nores-01

ನವದೆಹಲಿ. ಡಿ.15 : ಇಂದು  ಮಧ್ಯರಾತ್ರಿ ವರೆಗೆ ಮಾತ್ರ ಹಳೇಯ 500 ಮುಖಬೆಲೆಯ  ನೋಟುಗಳನ್ನು ಬಳಸಲು ಅವಕಾಶವಿದ್ದು, ಹಳೆಯ ೫೦೦ ರೂ. ಚಲಾವಣೆಗೆ  ಅವಧಿ ವಿಸ್ತರಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಈ ತಿಂಗಳ  ವಾರದಲ್ಲಿ ಸಾರ್ವಜನಿಕವಾಗಿ ರೂ. 1000, 500 ನೋಟುಗಳನ್ನು ಬಳಸದಿರುವಂತೆ ಸರ್ಕಾರ ನಿರ್ಬಂಧ ಹೇರಿತ್ತು. ಔಷಧಿ ಖರೀದಿ, ಬಸ್ ಪಾಸ್, ಮೊಬೈಲ್ ರೀಚಾರ್ಜ್ ಮುಂತಾದವುಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಡಿಸೆಂಬರ್ 16ರಿಂದ ಆ ಅವಕಾಶಗಳೂ ಇಲ್ಲವಾಗಲಿವೆ. ಬ್ಯಾಂಕುಗಳಲ್ಲಿ ಮಾತ್ರ ನಗದನ್ನು ಖಾತೆಗೆ ಜಮೆ ಮಾಡಬಹುದಾಗಿದೆ.

ಹಳೆಯ ನೋಟು ಬಳಸಿ ಮೊಬೈಲ್‌ ರೀಚಾರ್ಜ್‌ ಸೇರಿದಂತೆ ಇನ್ನಾವುದೇ ಪಾವತಿ ಸಾಧ್ಯವಿರುವುದಿಲ್ಲ. ಆದರೆ, ಬ್ಯಾಂಕ್‌ ಖಾತೆಗಳಿಗೆ 500 ಮುಖಬೆಲೆಯ ಹಳೆಯ ನೋಟುಗಳನ್ನು ಜಮೆ ಮಾಡಲು ಅಡ್ಡಿಯಿಲ್ಲ. ಹಳೆಯ ನೋಟುಗಳ ಬಳಕೆ ಡಿಸೆಂಬರ್‌ 15ರ ಮಧ್ಯರಾತ್ರಿ ಕೊನೆಗೊಳ್ಳಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್‌ ಟ್ವೀಟಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin