ಈ ದಿನದ ಪಂಚಾಂಗ ಮತ್ತು ರಾಶಿಭವಿಷ್ಯ (16-12-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ  : ಮೌನವಾಗಿದ್ದರೂ ಒಳ್ಳೆಯದೇ; ಆದರೆ ಸುಳ್ಳಾದ ಮಾತನ್ನಾಡುವುದು ಸಲ್ಲದು. ಪುರುಷನಿಗೆ ನಪುಂಸಕತ್ವವಾದರೂ ಉತ್ತಮ; ಆದರೆ ಪರಸ್ತ್ರೀ ಗಮನಸಲ್ಲದು. ಪ್ರಾಣ ತ್ಯಾಗವಾದರೂ ಒಳ್ಳೆಯದು; ಆದರೆ ಚಾಡಿ ಹೇಳುವುದರಲ್ಲಿ ಆಸಕ್ತಿ ಸಲ್ಲದು. ಭಿಕ್ಷೆ ಬೇಡಿ ಹೊಟ್ಟೆ ಹೊರೆಯುವುದೂ ಶ್ರೇಷ್ಠ. ಆದರೆ ಮತ್ತೊಬ್ಬರ ಧನದ ಸವಿಯಿಂದ ಬರುವ ಬಲ ಮಾತ್ರ ಬೇಡ.  – ಚತುರ್ವರ್ಗಸಂಗ್ರಹ

Rashi x1

ಪಂಚಾಂಗ : ಶುಕ್ರವಾರ 16.12.2016

ಸೂರ್ಯ ಉದಯ ಬೆ.6.34 / ಸೂರ್ಯ ಅಸ್ತ ಸಂ.5.57
ಚಂದ್ರ ಅಸ್ತ  ಬೆ.8.36 / ಚಂದ್ರ ಉದಯ  ರಾ.8.32
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ  (ರಾ.8.36)
ನಕ್ಷತ್ರ: ಪುನರ್ವಸು  (ಮ.2.25) / ಯೋಗ: ಬ್ರಹ್ಮ (ಮ.1.15) / ಕರಣ:ವಣಿಜ್-ಭದ್ರೆ (ಬೆ.9.45-ರಾ.8.36)
ಮಳೆ ನಕ್ಷತ್ರ: ಅನುರಾಧ / ಮಾಸ: ಧನಸ್ಸು / ತೇದಿ: 2

ಮೇಷ: ಇಂದು ನಿಮ್ಮ ಮನಸ್ಸಿನ ಸ್ಥಿರತೆ ಕಾಪಾಡಿಕೊಳ್ಳಿ. ಬಂಧುಗಳಿಂದ ಶುಭವಾರ್ತೆ ಕೇಳುವಿರಿ.
ವೃಷಭ: ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲ ಲಭಿಸಿದರೂ ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ.
ಮಿಥುನ:ಗೃಹಸಂಬಂಧ ಹೊಣೆಗಾರಿಕೆಗಳ ಬೆಳವಣಿಗೆ ಬಗ್ಗೆ ಸಂತಸ ಹೊಂದುತ್ತೀರಿ.
ಕರ್ಕಾಟಕ: ವ್ಯವಹಾರದಲ್ಲಿ ನಷ್ಟ ಸಂಭವಿಸಿದರೂ ಹಣಕಾಸಿನ ತೊಂದರೆ ಎದುರಾಗದು. ಮಡದಿಯಿಂದ ಸಹಕಾರ ದೊರೆಯಲಿದೆ.
ಸಿಂಹ: ವಿಚಾರವಂತರಾಗಿ ಯೋಜನೆ ರೂಪಿಸುವ ಮೂಲಕ ಯಶಸ್ಸು. ಕನ್ಯಾ: ನಿಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲಿದ್ದೀರಿ,
ತುಲಾ: ನಿಮ್ಮ ಆಲೋಚನೆಗಳಿಗೂ ಮೂರ್ತರೂಪ ಕೊಡಬಲ್ಲ ದಿನ.
ವೃಶ್ಚಿಕ: ನಿಮ್ಮ ಹೊರನೋಟವನ್ನು ಬದಲಿಸಿದಲ್ಲಿ ನೀವು ನಿಶ್ಚಯವಾಗಿ ಯಶಸ್ವಿ ಹೊಂದುವಿರಿ.
ಧನಸ್ಸು: ಜನಪ್ರಿಯತೆ ಹೆಚ್ಚುತ್ತದೆ. ಮಕ್ಕಳ ಬೆಂಬಲ ದೊರೆಯಲಿದೆ.
ಮಕರ: ಮನೆಯ ಸುತ್ತಲೂ ಕೆಲವು ಆಧುನಿಕ ಮಾರ್ಪಾಡುಗಳನ್ನು ಮಾಡುವಿರಿ
ಕುಂಭ: ನಿಮ್ಮ ವ್ಯವಹಾರ ವರ್ಧನೆಗೆ ಇದು ಸಕಾಲ. ಸ್ವತ್ತು ವಿವಾದ ಪರಿಹಾರದಿಂದ ಮನೋಲ್ಲಾಸ.
ಮೀನ: ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಇದೆ. ಸಹೋದರರ ಕಡೆಯಿಂದ ಧನಸಹಾಯ.

Eesanje News App

Facebook Comments

Sri Raghav

Admin