ನೋಟ್ ಬ್ಯಾನ್ ನಂತರ ಅಕೌಂಟ್’ಗೆ ಲಕ್ಷಗಟ್ಟಲೆ ಹಣ ಜಮೆ ಮಾಡಿದವರಿಗೆ ಆರ್‍ಬಿಐ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

RBI

ಮುಂಬೈ, ಡಿ.16- ಅಘೋಷಿತ ಕಪ್ಪುಹಣವನ್ನು ಪರಿವರ್ತಿಸಿಕೊಳ್ಳಲು ಬ್ಯಾಂಕ್ ಖಾತೆಗಳನ್ನು ಬಳಕೆ ಮಾಡುತ್ತಿರುವುದರ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತಷ್ಟು ಬಿಗಿ ನೀತಿ ಜಾರಿಗೊಳಿಸಿದೆ.  ಆರ್‍ಬಿಐ ವಿಧಿಸಿರುವ ನಿರ್ಬಂಧದ ಅನ್ವಯ ನ.9ರ ಬಳಿಕ 2 ಲಕ್ಷ ರೂ.ಗಳನ್ನು ಖಾತೆಗೆ ಜಮೆ ಮಾಡಿದ್ದರೆ ಹಾಗೂ ಖಾತೆಯಲ್ಲಿನ ಮೊತ್ತ ಐದು ಲಕ್ಷಕ್ಕಿಂತ ಹೆಚ್ಚಿದ್ದರೆ, ಅಂಥ ಖಾತೆಗಳಿಂದ ಹಣ ಪಡೆಯದಂತೆ ನಿರ್ಬಂಧ ವಿಧಿಸಲಾಗಿದೆ. ಪಾನ್ ಕಾರ್ಡ್ ಸಂಖ್ಯೆ ನಮೂದಿಸದೇ ಈ ಖಾತೆಗಳಿಂದ ಹಣ ಪಡೆಯುವಂತಿಲ್ಲ ಹಾಗೂ ವರ್ಗಾಯಿಸುವಂತಿಲ್ಲ ಎಂದು ಆರ್‍ಬಿಐ ಅಧಿಸೂಚನೆ ಹೇಳಿದೆ.

ಸಣ್ಣ ಖಾತೆಗಳಲ್ಲಿ ವಾರ್ಷಿಕ ಮಿತಿಯಾದ ಒಂದು ಲಕ್ಷ ರೂ.ಗಿಂತ ಹೆಚ್ಚಿನ ಹಣ ಜಮೆಯಾಗಿದ್ದರೆ, ಮಾಸಿಕ 10 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಖಾತೆಯಿಂದ ಪಡೆಯುವಂತಿಲ್ಲ ಎಂದೂ ನಿರ್ಬಂಧ ವಿಧಿಸಲಾಗಿದೆ. ಎಲ್ಲ ಬ್ಯಾಂಕ್‍ಗಳು ಕೆವೈಸಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಆರ್ಬಿಐ ಸೂಚಿಸಿದೆ. ಕೆವೈಸಿ ಮಾರ್ಗಸೂಚಿ ಅನ್ವಯ ದಾಖಲಾತಿಗಳನ್ನು ನೀಡದ ಖಾತೆಗಳಿಂದ ಹಣವನ್ನು ವರ್ಗಾಯಿಸುವಂತೆಯೂ ಇಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.

ಆರಂಭಿಕ ಹಂತದಲ್ಲಿ ಐದು ಲಕ್ಷಕ್ಕಿಂತ ಅಧಿಕ ಠೇವಣಿ ಇರುವ ಖಾತೆಗಳಿಗೆ ಇದು ಅನ್ವಯಿಸುತ್ತದೆ. ನ.9ರ ಬಳಿಕ ಎಲೆಕ್ಟ್ರಾನಿಕ್ ವರ್ಗಾವಣೆಯೂ ಸೇರಿದಂತೆ 2 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತ ಖಾತೆಗೆ ಜಮೆಯಾಗಿದ್ದಲ್ಲಿ, ಇದು ಅನ್ವಯಿಸುತ್ತದೆ ಎಂದು ಹೇಳಿದೆ.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin