ಪ್ಲೇಗ್ ಮಾರಮ್ಮ ದೇವಸ್ಥಾನದ ಪೂಜಾರಿ ಕತ್ತು ಕೊಯ್ದು ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

murder

ಬೆಂಗಳೂರು, ಡಿ.16-ಪ್ಲೇಗ್ ಮಾರಮ್ಮ ದೇವಸ್ಥಾನದ ಪೂಜಾರಿಯನ್ನು ದುಷ್ಕರ್ಮಿಗಳು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂ.ವಿ. ಗಾರ್ಡನ್, 12ನೆ ಮುಖ್ಯರಸ್ತೆ, 12ನೆ ಕ್ರಾಸ್ ನಿವಾಸಿ ವಾಸುಸ್ವಾಮಿ (55) ಕೊಲೆಯಾದ ಪೂಜಾರಿ. ಇವರು ನೆಲಮಾಳಿಗೆಯಲ್ಲಿ ಪ್ಲೇಗ್ ಮಾರಮ್ಮ ದೇವಸ್ಥಾನ ಮಾಡಿಕೊಂಡು ಪೂಜೆ ಮಾಡುವುದರ ಜೊತೆಗೆ ಶಾಸ್ತ್ರ ಹೇಳುತ್ತಿದ್ದರು. ರಾತ್ರಿ ವೇಳೆ ಇಲ್ಲಿಯೇ ಮಲಗುತ್ತಿದ್ದರು.  ಮೊದಲನೆ ಮಹಡಿಯಲ್ಲಿ ಇವರ ತಾಯಿ, ಪತ್ನಿ ಹಾಗೂ ಮಕ್ಕಳು ವಾಸವಿದ್ದಾರೆ. ಪ್ರತಿದಿನ ವಾಸುಸ್ವಾಮಿ ಅವರು ಮುಂಜಾನೆ 5 ಗಂಟೆಗೆ ಏಳುವುದು ವಾಡಿಕೆ. ರಾತ್ರಿ ಎಂದಿನಂತೆ ಪೂಜೆ ಮುಗಿಸಿ ಮನೆಗೆ ಬಂದು ಊಟ ಮಾಡಿ  ಮತ್ತೆ ನೆಲಮಾಳಿಗೆಗೆ ಹೋಗಿ ಮಲಗಿದ್ದಾರೆ.

ಇಂದು ಬೆಳಗ್ಗೆ ವಾಸುಸ್ವಾಮಿ ಏಳದ ಕಾರಣ ಇವರ ತಾಯಿ ಮೊದಲ ಮಹಡಿಯಿಂದಲೇ ಕೂಗಿ ಕರೆದಿದ್ದಾರೆ. ಆಗಲೂ ಬಾರದಿದ್ದಾಗ ಕೆಳಗೆ ಬಂದು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯದ ಕಾರಣ ಬಲವಂತವಾಗಿ ಬಾಗಿಲು ತಳ್ಳಿ ನೋಡಿದಾಗ ರಕ್ತದ ಮಡುವಿನಲ್ಲಿ ಮಗ ಬಿದ್ದಿರುವುದು ಕಂಡು ಕಿರುಚಿಕೊಂಡಿದ್ದಾರೆ. ಇವರ ಕೂಗಾಟ ಕೇಳಿ ಮನೆಯವರು, ಅಕ್ಕಪಕ್ಕದವರು ಧಾವಿಸಿದ್ದಾರೆ. ದುಷ್ಕರ್ಮಿಗಳು ವಾಸುಸ್ವಾಮಿಯವರ ಭುಜ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಕಂಡು ಬಂದಿದೆ. ಸುದ್ದಿ ತಿಳಿದ ಹಲಸೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಶವವನ್ನು  ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin