ಮುಂದಿನ ಶೈಕ್ಷಣಿಕ ವರ್ಷಕ್ಕೆ ಆರ್‍ಟಿಇ ಸೀಟು ಪಡೆಯಲು ಆಧಾರ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

RTE-Adhar

ಬೆಂಗಳೂರು, ಡಿ.16- ನಿಮ್ಮ ಮಗುವಿಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಆರ್‍ಟಿಇ ಸೀಟು ಪಡೆಯುವ ಕನಸಿನಲ್ಲಿದ್ದೀರಾ? ಹಾಗಿದ್ದರೆ ನೀವು ಈಗಲೇ ನಿಮ್ಮ ಆಧಾರ್ ಕಾರ್ಡ್ ಸಿದ್ಧಪಡಿಸಿಕೊಳ್ಳಿ. ಹೌದು, ಮುಂದಿನ ಶೈಕ್ಷಣಿಕ ವರ್ಷದಿಂದ ಆರ್‍ಟಿಇ ಸೀಟ್ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.  ಆಧಾರ್ ಕಾರ್ಡ್‍ನಲ್ಲಿ ನಮೂದಿಸಿರುವ ವಿಳಾಸದ ಆಧಾರದ ಮೇಲೆ ಆರ್.ಟಿ.ಇ ಸೀಟ್ ಹಂಚಿಕೆ ಮಾಡಲು ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆ ಒಂದು ಸುತ್ತಿನ ಚರ್ಚೆ ಸಹ ಪೂರ್ಣಗೊಳಿಸಿದೆ. ಸದ್ಯದಲ್ಲೇ ಶಿಕ್ಷಣ ಇಲಾಖೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ತಿಳಿದುಬಂದಿದೆ.

2017 ಮತ್ತು 18ನೆ ಸಾಲಿನಲ್ಲಿ ಪೋಷಕರು ಆಧಾರ ಕಾರ್ಡ್‍ನಲ್ಲಿ ನಮೂದಿಸಿರುವ ವಿಳಾಸದ ವ್ಯಾಪ್ತಿಯಲ್ಲಿ ಮಾತ್ರ ಆರ್‍ಟಿಇ ಸೀಟು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅಲ್ಲದೆ, ಇದುವರೆಗೂ ಆರ್‍ಟಿಇ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಇದ್ದ ನಿರ್ಬಂಧಗಳನ್ನು ಕೈಬಿಡಲು ತೀರ್ಮಾನಿಸಿದೆ.  ಈವರೆಗೂ ಪೋಷಕರು ತಮ್ಮ ವಾರ್ಡ್ ವ್ಯಾಪ್ತಿಯ ಐದು ಶಾಲೆಗಳಲ್ಲಿ ಮಾತ್ರ ಸೀಟು ಆಯ್ಕೆ ಮಾಡಿಕೊಳ್ಳಲು ಅವಕಾಶವಿತ್ತು. ಇದೀಗ ಪೋಷಕರು ತಮ್ಮ ಸನಿಹದ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಸೀಟು ಪಡೆಯಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಉದ್ಯೋಗ ಅರಸಿ ಬಂದವರಿಗೆ ಸಮಸ್ಯೆ:

ಆದರೆ ಉದ್ಯೋಗ, ಮತ್ತಿತರ ಕಾರಣಗಳಿಗಾಗಿ ನಗರದಲ್ಲಿ ನೆಲೆಸಿರುವ ಪೋಷಕರಿಗೆ ಆಧಾರ್ ವ್ಯಾಪ್ತಿಯ ಶಾಲೆಗಳ ಆಯ್ಕೆ ಸಮಸ್ಯೆ ತರಲಿದೆ. ನಗರದಲ್ಲಿ ನೆಲೆಸಿರುವ ಬಹುತೇಕ ಉದ್ಯೋಗಸ್ಥ ಪೋಷಕರು ತಮ್ಮ ಆಧಾರ್ ಕಾರ್ಡ್ ಗಳಲ್ಲಿ ತಮ್ಮ ಸ್ವಂತ ಊರುಗಳ ವಿಳಾಸ ಹೊಂದಿದ್ದಾರೆ. ಅಲ್ಲದೇ ಎರಡು-ಮೂರು ವರ್ಷಕ್ಕೊಮ್ಮೆ ಬಾಡಿಗೆ ಮನೆ ಬದಲಾಯಿಸುವ ಪೋಷಕರ ಪಾಲಿಗೂ ಇದು ಕಷ್ಟವಾಗಲಿದೆ.ಹೀಗಾಗಿ ನಗರದ ಸಾವಿರಾರು ಪೋಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಿಕ್ಷಣ ಇಲಾಖೆ ಈ ಸುತ್ತೋಲೆ ಹೊರಡಿಸಿದ ಬಳಿಕ ಪೋಷಕರ ಸಂಘದ ವತಿಯಿಂದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin