ಗನ್ ಪಾಯಿಂಟ್’ನಲ್ಲಿ ನವ ವಿವಾಹಿತೆ ಮೇಲೆ ಪತಿ ಮತ್ತು ಆತನ ಗೆಳೆಯರಿಂದ ಗ್ಯಾಂಗ್ ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Rape-Gun--Point

ಮೆದಿನಿನಗರ, ಡಿ.17-ಗನ್ ತೋರಿಸಿ ಕೊಲ್ಲುವುದಾಗಿ ಬೆದರಿಸಿ ಪತಿಯೇ ಗೆಳೆಯರೊಂದಿಗೆ ನವ ವಿವಾಹಿತ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‍ನ ಗ್ರಾಮವೊಂದರಲ್ಲಿ ನಡೆದಿದೆ. ಈ ಘಟನೆ ಮಾನವನ ನೀಚ ಗುಣಕ್ಕೆ ಮತ್ತೊಂದು ಸಾಕ್ಷಿಯಾಗಿದೆ.   ಪಲಮೌ ಜಿಲ್ಲೆಯ ರಹೈಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಫ್ಜಲ್ ಅನ್ಸಾರಿ ಮತ್ತು ಆತನ ಇಬ್ಬರು ಸ್ನೇಹಿತರು ಗನ್ ತೋರಿಸಿ ಗ್ಯಾಂಗ್ ರೇಪ್ ನಡೆಸಿದ್ದಾರೆ. ಅನ್ಸಾರಿ ಕೆಲ ದಿನಗಳ ಹಿಂದಷ್ಟೇ ಅದೇ ಗ್ರಾಮದ ತರುಣಿಯನ್ನು ವಿವಾಹವಾಗಿದ್ದ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹೀರಾಲಾಲ್ ರವಿ ತಿಳಿಸಿದ್ದಾರೆ.

ಪತಿ ಅನ್ಸಾರಿ ಮತ್ತು ಆತನ ಗೆಳೆಯರಾದ ಬಬ್ಲು ಸಿಂಗ್ ಮತ್ತು ಅಫ್ಜಲ್ ಮಿಯಾ ಕಳೆದ ಬುಧವಾರ ರಾತ್ರಿ ಮನೆಗೆ ಬಂದರು. ಗನ್ ತೋರಿಸಿದ ಅನ್ಸಾರಿ ಸ್ನೇಹಿತರ ಎದುರೇ ನನ್ನ ಮೇಲೆ ಅತ್ಯಾಚಾರ ಎಸಗಿದ. ನಂತರ ಸಿಂಗ್ ಮತ್ತು ಮಿಯಾ ಅವರಿಗೂ ನನ್ನನ್ನು ಬಲಾತ್ಕಾರ ನಡೆಸಲು ಅವಕಾಶ ನೀಡಿದ. ಅಲ್ಲದೇ ಒಬ್ಬರಾದ ಮೇಲೆ ಒಬ್ಬರಂತೆ ಎಸಗಿದ ಈ ಕೃತ್ಯಗಳನ್ನು ಮೊಬೈಲ್ ಪೋನ್‍ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ.  ಈ ಮೂವರು ಅತ್ಯಾಚಾರ ಎಸಗಿದ ನಂತರ ಮತ್ತೆ ಗನ್ ತೋರಿಸಿದ ಆರೋಪಿಗಳು ಈ ಬಗ್ಗೆ ಬಾಯ್ಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಮನೆಯಲ್ಲಿ ಕೂಡಿಟ್ಟಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮರುದಿನ ಅಲ್ಲಿಂದ ತಪ್ಪಿಸಿಕೊಂಡ ಮಹಿಳೆ ತನ್ನ ಪೋಷಕರಿಗೆ ಮಾಹಿತಿ ನೀಡಿದಳು. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಠಾಣಾಧಿಕಾರಿ ಮೂವರು ಆರೋಪಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಮೊಕದ್ದಮೆ ದಾಖಲಿಸದೇ ವಾಪಸ್ ಕಳಿಸಿದ್ದರು. ಈ ಬಗ್ಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ನಂತರ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಡಿಎಸ್ಪಿ ಸೂಚನೆ ನೀಡಿದ್ದಾರೆ.  ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin