ಚಾಲಕನಾಗಿ ಕೆಲಸಕ್ಕೆ ಕಾರು ಕಳ್ಳತನ ಮಾಡುತ್ತಿದ್ದ ಮೂವರ ಬಂಧನ : ಎರಡು ಕಾರು, 21 ದ್ವಿಚಕ್ರ ವಾಹನ ವಶ

ಈ ಸುದ್ದಿಯನ್ನು ಶೇರ್ ಮಾಡಿ

Crime-01

ಬೆಂಗಳೂರು,ಡಿ.17-ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡು ಸಮಯ ಸಾಧಿಸಿ ಎರಡು ಕಾರು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳು ಹಾಗೂ ಮತ್ತೊಂದು ಪ್ರಕರಣದಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ 17 ಲಕ್ಷ ರೂ. ಮೌಲ್ಯದ 21 ದ್ವಿಚಕ್ರ ವಾಹನಗಳು ಹಾಗೂ ಎರಡು ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏರ್‍ ಪೋರ್ಟ್ ಠಾಣೆ:

ಕಾರು ಚಾಲಕ ವೃತ್ತಿಗೆ ಸೇರಿಕೊಂಡಿದ್ದ ವಿಶಾಲ್ ನೀಲಂ ಎಂಬಾತ ನವೆಂಬರ್ 17ರಂದು ಮಾಲೀಕರನ್ನು ಮುರುಗೇಶ್ ಪಾಳ್ಯದ ಓಲಾ ಕ್ಯಾಬ್ ಕಂಪನಿಗೆ ಕರೆತಂದು ತನ್ನ ಡಿಎಲ್ ತರುವುದಾಗಿ ಹೇಳಿ ವಾಹನದ ಕೀ ಪಡೆದು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರನ್ನು ಅಪಹರಿಸಿ ಪರಾರಿಯಾಗಿದ್ದನು.   ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಏರ್‍ಪೋರ್ಟ್ ಠಾಣೆ ಇನ್‍ಸ್ಪೆಕ್ಟರ್ ನವೀನ್ ಕುಲಕರ್ಣಿ ಅವರು ಎಸಿಪಿ ನಾಗೇಶ್‍ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಬೀದರ್ ಮೂಲದವನಾದ ಆರೋಪಿ ವಿಶಾಲ್ ನೀಲಂ(22) ಮತ್ತು ಶಂಶುದ್ದೀನ್(22)ನನ್ನು ಬಂಧಿಸಿ ಎರಡು ಸಿಫ್ಟ್ ಡಿಸೈರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರ:

ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಆರೋಪಿ ಪ್ರಸನ್ನ(18) ಎಂಬಾತನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ 17 ಲಕ್ಷ ರೂ. ಬೆಲೆಯ 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿ ಬಂಧನದಿಂದ ಪರಪ್ಪನ ಅಗ್ರಹಾರ ಠಾಣೆ ಸರಹದ್ದಿನಲ್ಲಿ ಕಳ್ಳತನ ವಾಗಿದ್ದ 5 ಮೋಟಾರ್ ಬೈಕ್, ಮಡಿವಾಳ, ಕೆ.ಎಸ್.ಲೇಔಟ್, ಆಡುಗೋಡಿ, ಎಚ್‍ಎಸ್‍ಆರ್ ಲೇಔಟ್, ಜೆಪಿನಗರ, ವಿವೇಕನಗರ, ತಲಘಟ್ಟಪುರ, ಮಹದೆವಪುರ ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕಳ್ಳತನ ಮಾಡಿದ್ದ ತಲಾ ಒಂದು ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾದಂತಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin