ಬೆಂಗಳೂರಿನಲ್ಲಿ ಕೇಕ್ ನಿಂದ ನಿರ್ಮಾಣವಾಯ್ತು ಲಂಡನ್ ಬ್ರಿಡ್ಜ್ : ಕೇಕ್ ಶೋನಲ್ಲಿ ಅಮೋಘ ಪ್ರತಿಕೃತಿಗಳ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Cacke-Show-1 ಬೆಂಗಳೂರು, ಡಿ.17-ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಮೀಪಿಸುತ್ತಿದ್ದಂತೆ ನಗರದ ಜನತೆಯನ್ನು ಸೆಳೆಯುವ ಕೇಕ್ ಪ್ರದರ್ಶನ ಈ ಬಾರಿಯೂ ಲಂಡನ್ ಸೇತುವೆಯ ಪ್ರತಿಕೃತಿಯೊಂದಿಗೆ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ.  ನಗರದ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರೀಯ ಗ್ರಾಹಕ ಮೇಳದ ಸಹಯೋಗದಲ್ಲಿ ಆರಂಭವಾಗಿರುವ ದೇಶದ ಅತಿ ದೊಡ್ಡ ಕ್ರಿಸ್‍ಮಸ್ ಕೇಕ್ ಪ್ರದರ್ಶನ ತನ್ನ ಸೃಜನಶೀಲ ಕಲೆಯಿಂದ ಎಲ್ಲರ ಕಣ್ಮನ ತಣಿಸಲು ಜ.1ರವರೆಗೂ ನಡೆಯಲಿದೆ.

Cacke-Show-8

ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 9ವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಈ ಬಾರಿ ವಿಶ್ವಪ್ರಸಿದ್ಧಿಯಾದ ಲಂಡನ್ ಬ್ರಿಡ್ಜ್ ನಿರ್ಮಿಸಲಾಗಿದ್ದು, ಈಗಾಗಲೇ ನರ್ಸರಿ ಮಕ್ಕಳ ಪದ್ಯದಲ್ಲಿ ಹೊಗಳಿಸಿಕೊಂಡಿರುವ ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್‍ಡೌನ್…. ಫಾಲಿಂಗ್‍ಡೌನ್… ಇದೀಗ ಕಣ್ಮುಂದೆ ಬಂದು ನಿಂತಿದೆ.

Cacke-Show-7

ಕೇಕ್ ಪ್ರದರ್ಶನದ ರೂವಾರಿಯಾದ 76ರ ಹರೆಯದ ರಾಮಚಂದ್ರನ್ ಮೇಲ್ವಿಚಾರಣೆಯಲ್ಲಿ 14 ಅಡಿ ಉದ್ದದ 7 ಅಡಿ ಅಗಲದ ಹಾಗೂ 8 ಅಡಿ ಎತ್ತರದ ಬ್ರಿಡ್ಜನ್ನು 500 ಕೆಜಿ ಕೇಕ್‍ನಲ್ಲಿ ಸತತವಾಗಿ 65 ದಿನಗಳ ಕಾಲ ಕಾರ್ಯನಿರ್ವಹಿಸಿದ ಐದು ಮಂದಿ ಪರಿಶ್ರಮದಿಂದ ಮೈದಳೆದು ನಿಂತಿದೆ.  1886-1894ರಲ್ಲಿ ಥೇಮ್ಸ್ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಈ ಸೇತುವೆ ಲಂಡನ್ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ನೆಚ್ಚಿನ ತಾಣ.

Cacke-Show-10

ಇದಲ್ಲದೆ, ಚೀನಾದವರ ನಂಬಿಕೆಯಂತೆ ಹಾವಿನ ರೂಪದ ನಾಲ್ಕು ಕಾಲಿನ ಡ್ರಾಗನ್‍ಗಳು ಅದೃಷ್ಟದ ಸಂಕೇತ. ಈ ಡ್ರಾಗನ್‍ಗಳನ್ನು 14 ಅಡಿ ಉದ್ದ 4 ಅಡಿ ಅಗಲ, 7.5 ಅಡಿ ಎತ್ತರದಲ್ಲಿ ಸುಮಾರು 400 ಕೆಜಿ ಕೇಕ್ ಬಳಸಿ ನಿರ್ಮಿಸಲಾಗಿದೆ. ಮಧ್ಯಪ್ರಾಚ್ಯದ ಜಾನಪದ ವ್ಯಕ್ತಿ ಅಲ್ಲಾವುದ್ದೀನ್ ಮತ್ತು ಆತನ ಸುತ್ತ ಹೆಣೆಯಲಾದ ಹಲವಾರು ಕಥೆಗಳ ಪೈಕಿ ಮ್ಯಾಜಿಕ್ ಚಾಪೆಯೂ ಒಂದು. ಇದನ್ನು ಆಧರಿಸಿ ಒಂದು ಪ್ರತಿಕೃತಿಯನ್ನು ನಿರ್ಮಿಸಲಾಗಿದೆ.

Cacke-Show-2

ಇದಲ್ಲದೆ, ಮಕ್ಕಳ ಅಚ್ಚುಮೆಚ್ಚಿನ ಕಥಾನಾಯಕರಾದ ಜಾಕ್ ಮತ್ತು ಬಿನ್‍ಸ್ಟಾಕ್, ತಂಜಾವೂರಿನ ಚಿತ್ರಕಲೆಯನ್ನು ಕೇಕ್‍ನಲ್ಲಿ ಮೂಡಿಸಲಾಗಿದೆ. ಬೊಂಬೆಗಳೆಂದರೆ ಮಕ್ಕಳಿಗೆ ಪ್ರಾಣ. ಇಂತಹ ಆಟಿಕೆಗಳ ಡಾಲ್‍ಹೌಸ್ ಕೇಕ್‍ನಲ್ಲಿ ಮೂಡಿದರೆ ಅವರ ಸಂತಸಕ್ಕೆ ಪಾರವೇ ಇರುವುದಿಲ್ಲ. ಮಕ್ಕಳ ಮನೋರಂಜನೆ ಮಾತ್ರವಲ್ಲದೆ, ಅವರನ್ನು ಬಹಳವಾಗಿ ಸೆಳೆಯುವ ಕುಕಿ ಡಾಲ್‍ಹೌಸ್‍ಸುಂದರವಾಗಿ ಮೂಡಿಬಂದಿದೆ.  ಇದಲ್ಲದೆ, ವಿದೇಶಿಯರನ್ನು ಕೈಬೀಸಿ ಕರೆಯುವ ರಾಜಸ್ಥಾನದ ಅರಸರ ಮದುವೆ ಸಂಭ್ರಮ, ಫಿಕ್ಸೆಲ್:ಮದುವೆಯ ಕೇಕ್, ವಿಕ್ಟೋರಿಯಾ ಗೌನ್, ರಾಷ್ಟ್ರೀಯ ಪಕ್ಷಿ ನವಿಲು, ಸೀಕ್ರೇಟ್ ಸಾಂತಾ ಹಾಗೂ ಕ್ರಿಸ್ಮಸ್ ಗಿಫ್ಟ್ ಕೇಕ್, ಈಜಿಪ್ಟಿಯನ್ ರಾಣಿ ನೆಫ್ರಿಟಿ, ರೇಸ್ ಕಾರ್, ಮನಿ ಟ್ರೀ, ಕಪ್ ಕೇಕ್, ಚೆಸ್ ಕೇಕ್‍ಗಳೊಂದಿಗೆ ಕನ್ನಡದ ನಟ, ನಿರ್ದೇಶಕ, ನಾಟಕಕಾರ, ಸಂಗೀತ ನಿರ್ದೇಶಕರಾದ ಶಂಕರ್‍ನಾಗ್ ಅವರನ್ನು ಕೇಕ್‍ನ ಪ್ರತಿಕೃತಿಯಲ್ಲಿ ಕಡೆದು ನಿಲ್ಲಿಸಲಾಗಿದೆ. ಲೇಡಿಸ್‍ಪರ್ಸ್, ಸಂಪ್ರದಾಯಿಕ ರಾಯಲ್ ಕೇಕ್‍ನಂತಹ ಅದೆಷ್ಟೋ ವಿವಿಧ ಮಾದರಿಯ ಕೇಕ್‍ಗಳು ನೋಡುಗರನ್ನು ಮನತಣಿಸದೆ ಇರದು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Cacke-Show-6

Cacke-Show-4

Cacke-Show-3

Cacke-Show-5

Cacke-Show-9

Facebook Comments

Sri Raghav

Admin