ಮುಂದಿನ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುತ್ತೇವೆ : ಹೆಚ್ದಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು.ಡಿ.17 : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುತ್ತೇವೆ ಉಳಿದ ಯಾರು ಕೂಡಾ ಸ್ಫರ್ಧೆ ಮಾಡಲ್ಲ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಯಾರೂ ಕೂಡಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಲೋಕಸಭಾ ಚುನಾವಣೆಗೆ ಇನ್ನೂ ಸಮಯ ಇದೆ, ಆಗ ಪರಿಸ್ಥಿತಿ ನೋಡಿ ಬಳಿಕ ಪರಿಶೀಲಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ನಿನ್ನೆ ಆದಿಚುಂಚನಗಿರಿ ಮಠದಲ್ಲಿ ಶಾಸಕ ಗೋಪಾಲಯ್ಯ ಅವರನ್ನು ಭೇಟಿ ಮಾಡಿದ್ದೆ, ಅವರು ನನಗೆ ಶುಭಾಷಯ ಕೋರಲು ಬಂದಿದ್ದರು. ಆದರೆ ಅವರ ಜೊತೆ ನಿನ್ನೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಅವರೊಂದಿಗೆ ಚರ್ಚಿಸಿಲ್ಲ. ಗೋಪಾಲಯ್ಯ ಅವರು ಅಮಾನತು ಮಾಡಿದ ಬಳಿಕವೂ ಪಕ್ಷದ ಬ್ಯಾನರ್ ಅಡಿಯಲ್ಲೇ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿದ್ದಾರೆ ಎಂದರು. ಆದರೆ ಅವರು ನನ್ನ ಬಳಿ ನನ್ನ ಬಳಿ ಕ್ಷಮೆಯಾಚಿಸಿಲ್ಲ ಎಂದರು.  ಇನ್ನು ಎಂಟು ಅಮಾನತುಗೊಂಡಿರುವ ಶಾಸಕರಿಗೆ ಶಿಸ್ತು ಸಮಿತಿ ನೋಟಿಸ್ ಕೊಟ್ಟಿದೆ, ಸಮಿತಿ ಮುಂದೆ ಉತ್ತರ ಕೊಟ್ಟಾಗ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಸಮಿತಿ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

ಮುಂಬರೋ ವಿಧಾನಸಭಾ ಚುನಾವಣೆಯಲ್ಲಿ ನಾನು ಹಾಗು ರೇವಣ್ಣ ಹೊರುತಪಡಿಸಿದ್ರೆ,ನಮ್ಮ ಕುಟುಂಬದವ್ರು ಯಾರು ಚುನಾವಣೆಗೆ ನಿಲ್ಲಲ್ಲ.. ನನ್ನ ಮಗ ನಿಖಿಲ್ ಕುಮಾರ್ ,ಪತ್ನಿ ಅನಿತಾ ಕುಮಾರಸ್ವಾಮಿ,ರೇವಣ್ಣ ಪತ್ನಿ ಭವನಿ ರೇವಣ್ಣ ನಿಲ್ಲಲ್ಲ. ಯಾವುದೇ ಕಾರಣಕ್ಕೂ ನಮ್ಮ ಕುಟುಂಬದವ್ರು ಬೇರೆ ಯಾರು ನಿಲ್ಲಲ್ಲ. ಲೋಕಸಭಾ ಚುನಾವಣೆ ಬಗ್ಗೆ ಈಗಲೇ ಏನು ಹೇಳೋದಿಲ್ಲ. ಇನ್ನು ಸಾಕಷ್ಟು ಸಮಯ ಇದೆ. ನಮ್ಮ ಪಕ್ಷದ ಸಂಸದರ ಸಂಖ್ಯೆ ಹೆಚ್ಚು ಮಾಡಬೇಕಾದ್ರೆ ಆಗ ನೋಡೋಣ ಎಂದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin