ಸೈಬರ್ ದಾಳಿ ಹಿಂದೆ ಪುಟಿನ್ ಕೈವಾಡವಿದೆ ಎಂದು ಆರೋಪಿಸಿದ ಒಬಾಮಾ

ಈ ಸುದ್ದಿಯನ್ನು ಶೇರ್ ಮಾಡಿ

Omabam-Rassia

ವಾಷಿಂಗ್ಟನ್, ಡಿ.17-ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಸೈಬರ್ ದಾಳಿಗಳ ಹಿಂದೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ರಷ್ಯಾದ ನೇರ ಕೈವಾಡ ಇದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಓಬಾಮಾ ಆರೋಪಿಸಿದ್ದಾರೆ. ವಿದೇಶಿ ದೇಶವೊಂದರ ಪ್ರಭಾವದ ಅಡಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ಖಾತರಿಗೊಳಿಸಬೇಕು ಎಂದು ತಮ್ಮ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್ ಅವರನ್ನು ಒಬಾಮ ಒತ್ತಾಯಿಸಿದ್ದಾರೆ.   ಶ್ವೇತಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪುಟಿನ್ ನಿರ್ದೇಶನದಂತೆ ಅಮೆರಿಕ ಮೇಲೆ ಸೈಬರ್ ದಾಳಿಗಳನ್ನು ನಡೆಸಲಾಗಿದೆ ಎಂದು ಟೀಕಿಸಿದ್ದರು.

ಇಂಟರ್‍ನೆಟ್ ಹ್ಯಾಕಿಂಗ್‍ನಲ್ಲಿ ರಷ್ಯಾದ ಅತ್ಯುನ್ನತ ಅಧಿಕಾರಿಯೊಬ್ಬರು ನೇರವಾಗಿ ಷಾಮೀಲಾಗಿದ್ದಾರೆ ಎಂದು ಶ್ವೇತಭವನ ಆರೋಪಿಸಿದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷರು ನಿನ್ನೆಯಷ್ಟೇ ಪ್ರತೀಕಾರದ ಕ್ರಮ ಕೈಗೊಳ್ಳುವುದಾಗಿ ಗುಡುಗಿದ್ದಾರೆ. ಅಮೆರಿಕ ರಾಜಕೀಯದಲ್ಲೇ ತಲ್ಲಣ ಮೂಡಿಸಿರುವ ಈ ಸ್ಪೋಟಕ ಮಾಹಿತಿಯನ್ನು ದೇಶದ ಬೇಹುಗಾರಿಕೆ ಸಂಸ್ಥೆ-ಸಿಐಎ ಬಹಿರಂಗಗೊಳಿಸಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ರಷ್ಯಾ, ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಗೆಲ್ಲಲು ನೆರವು ನೀಡಿದೆ ಎಂದು ಸಿಐಎ ವರದಿ ತಿಳಿಸಿತ್ತು. ಆದರೆ ಈ ಆರೋಪಗಳನ್ನು ರಿಪಬ್ಲಿಕನ್ ಪಕ್ಷದ ಮುಖಂಡರು ತಳ್ಳಿ ಹಾಕಿದ್ದರು..

ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲ್ಲಬೇಕು ಎಂಬ ಉದ್ದೇಶದಿಂದ ಕೆಲವೆಡೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಪರವಾಗಿ ರಷ್ಯಾ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಬಗ್ಗೆ ಮಾಹಿತಿ ಇದೆ ಎಂಬುದಾಗಿ ಸಿಐಎನ ರಹಸ್ಯ ಮËಲ್ಯಾಂಕನ ವರದಿಯಲ್ಲಿ ತಿಳಿಸಲಾಗಿದೆ ಎಂದು ವಾಷಿಂಗ್ಟನ್ ಪೋ ಸ್ಟ್ ವಿಸ್ಕøತ ವರದಿ ಮಾಡಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin