ಅಕ್ರಮ ಸಂಬಂಧದಿಂದ ನಡೀತು ಡಬಲ್ ಮರ್ಡರ್

ಈ ಸುದ್ದಿಯನ್ನು ಶೇರ್ ಮಾಡಿ

dOUBLE-mURDER

ಮಳವಳ್ಳಿ, ಡಿ.18-ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆ ಹಾಗೂ ವ್ಯಕ್ತಿಯೊಬ್ಬನನ್ನು ಮಧ್ಯರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬಾಲಕನ ಎದುರಲ್ಲೇ ಬರ್ಬರವಾಗಿ ಕೊಚ್ಚಿಕೊಲೆ ಮಾಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೆಲಮಾಕನಹಳ್ಳಿಯ ಶರಾವರಿ (42) ಹಾಗೂ ಸತೀಶ್ (27) ಹತ್ಯೆಗೀಡಾದವರು.  ಮಧ್ಯರಾತ್ರಿ 1 ಗಂಟೆ ವೇಳೆಗೆ ಕಾರಿನಲ್ಲಿ ಬಂದ ಕೆಲ ದುಷ್ಕರ್ಮಿಗಳು ಶರಾವತಿಯ ಮನೆಗೆ ನುಗ್ಗಿ ಆಕೆಯ 11 ವರ್ಷದ ಮಗ ಆಕಾಶ್‍ನ ಎದುರಿನಲ್ಲೇ ಶರಾವತಿ ಹಾಗೂ ಸತೀಶ್‍ನನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರ. ಈ ವೇಳೆ ಶರಾವತಿ, ಸತೀಶ್ ಹಾಗೂ ಬಾಲಕ ಆಕಾಶ್ ಸಹಾಯಕ್ಕಾಗಿ ಕೂಗಿಕೊಂಡರು. ಅಕ್ಕಪಕ್ಕದವರಿಗೆ ಕೂಗು ಕೇಳಿಸಿರಲಿಲ್ಲ.

ಶರಾವತಿ, ಸತೀಶ್ ಹಾಗೂ ಆಕಾಶ್ ಮನೆಯ ಮುಂಬಾಗಿಲು ಲಾಕ್ ಹಾಕಿ ಮಲಗಿದ್ದರು. ಡೋರ್ ಲಾಕ್ ಒಡೆದು ಒಳನುಗ್ಗಿದ ದುಷ್ಕರ್ಮಿಗಳ ತಂಡ ಇಬ್ಬರನ್ನು ಹತ್ಯೆಗೈದು ಪರಾರಿಯಾಗಿದೆ.
ಶರಾವತಿಯ ಗಂಡ ಸಿದ್ದೇಗೌಡ ಪ್ರಕರಣವೊಂದರ ಆರೋಪಿಯಾಗಿದ್ದು,ಜೀವಾವಧಿ ಶಿಕ್ಷೆಗೆ ಒಳಗಾಗಿ 2009ರಿಂದ ಮೈಸೂರಿನ ಜೈಲಿನಲ್ಲಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಶರಾವತಿಗೆ ಕೂಲಿ ಕೊಡಿಸಲು ಸತೀಶ್ ಆಗಾಗ ಕರೆದೊಯ್ಯುತ್ತಿದ್ದ ಬಗ್ಗೆಯೂ ಗಂಡ ಸಿದ್ದೇಗೌಡ ಆಕ್ಷೇಪ ವ್ಯಕ್ತಪಡಿಸಿ ಸತೀಶ್‍ಗೆ ಶರಾವತಿಯನ್ನು ಕೂಲಿಗೆ ಕರೆದೊಯ್ಯದಂತೆ ತಾಕೀತು ಮಾಡಿದ್ದ.
ಶರಾವತಿಗೆ ಇಬ್ಬರು ಮಕ್ಕಳಿದ್ದು 11 ವರ್ಷದ ಆಕಾಶ್‍ನನ್ನು ತನ್ನೊಂದಿಗೆ ಇರಿಸಿಕೊಂಡಿದ್ದರೆ ಮಗಳನ್ನು ಸಂಬಂಧಿಕರ ಮನೆಯಲ್ಲಿ ಇರಿಸಿದ್ದಳು. ಸತೀಶ್ ಹಾಗೂ ಶರಾವತಿ ಸಂಬಂಧಿಕರೇ ಆಗಿದ್ದು, ಶರಾವತಿಯ ಗಂಡ ಸಿದ್ದೇಗೌಡ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿಸಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ಥಾಮಸ್, ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್, ಬೆಳರಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೋಡಿ ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin