ಅಚ್ಚರಿಯಾದರೂ ಸತ್ಯ, ದೇವಾಲಯಗಳಲ್ಲಿರುತ್ತೆ +ve ಎನರ್ಜಿ..!

ಈ ಸುದ್ದಿಯನ್ನು ಶೇರ್ ಮಾಡಿ

+Ve-Energy-01

ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ ಎಂಬ ಮಾತಿನಿಂದ ನಿಜಕ್ಕೂ ಅಚ್ಚರಿಯಾಗಬಹುದು. ಆದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತವೆ ಅಧ್ಯಯನ  ದೇವಸ್ಥಾನಗಳನ್ನು ನಿರ್ಮಿಸುವ ಜಾಗಗಳಲ್ಲಿ ಆಯಸ್ಕಾಂತೀಯ ತರಂಗಗಳು(ಮ್ಯಾಗ್ನೆಟಿಕ್ ವೇವ್ಸ್) ಸದಾ ಪ್ರವಹಿಸುತ್ತಲೇ ಇರುತ್ತದೆ. ದೇವರ ಮೂಲ ಸ್ಥಾನ ಗರ್ಭಗುಡಿ… ಆ ಗರ್ಭ ಗುಡಿಗೆ ಅಥವಾ ಮೇಲ್ಛಾವಣಿಗೆ ಹೊದಿಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು. ಆ ತಾಮ್ರದ ಹೊದಿಕೆಗಳಲ್ಲೆ ಸದಾ ಸಕಾರಾತ್ಮಕ ಶಕ್ತಿ(ಪಾಸಿಟಿವ್ ಎನರ್ಜಿ) ಪ್ರವಹಿಸುತ್ತಲೇ ಇರುತ್ತದೆ. ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ.

ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಅದಕ್ಕೆ ಕಾರಣ ಇದೆ ಪಾಸಿಟಿವ್ ಎನರ್ಜಿ ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸು ಪ್ರಶಾಂತವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin