ಇಬ್ಬರು ಸೆಕ್ಸ್ ಬಾಂಬ್‍ಗಳ ನಡುವೆ ಸ್ಟಾರ್‍ವಾರ್‍

ಈ ಸುದ್ದಿಯನ್ನು ಶೇರ್ ಮಾಡಿ

19

ಹೊಸ ವರ್ಷದಲ್ಲೇ ಇಬ್ಬರು ಸೆಕ್ಸ್ ಬಾಂಬ್‍ಗಳ ನಡುವೆ ಸ್ಟಾರ್‍ವಾರ್‍ಗೆ ವೇದಿಕೆ ಸಜ್ಜಾಗಿದೆ . ಊರ್ವಶಿ ರೌಟೇಲಾ ಮತ್ತು ಸನ್ನಿ ಲಿಯೋನ್ ಗ್ಲಾಮರ್ ಸಾಂಗ್‍ಗಳ ಮೂಲಕ ಪೈಪೋರ್ಟಿ ಗೆ ನಿಂತಿದ್ದಾರೆ. ಬಾಲಿವುಡ್ ಬಾದ್‍ಶಾ ಶಾರುಖ್‍ಖಾನ್ ಅಭಿನಯದ ರಾಯೀಸ್ ಮತ್ತು ಸೂಪರ್‍ಸ್ಟಾರ್ ಹೃತಿಕ್ ರೋಷನ್ ನಟನೆಯ ಕಾಬಿಲ್ ಸಿನಿಮಾ ಜನವರಿ 25ರಂದು ಕ್ಲಾಶ್ ಆಗಲಿದೆ. ಒಂದಡೆ ಎಸ್‍ಆರ್‍ಕೆ ಮತ್ತು ಹೃತಿಕ್ ನಡುವೆ ಪೈಪೋರ್ಟಿ  ನಡೆಯುತ್ತಿದ್ದರೆ, ಇನ್ನೊಂದೆಡೆ ಐಟಂ ಸಾಂಗ್‍ಗಳಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡಿರುವ ಸನ್ನಿ (ರಾಯೀಸ್) ಮತ್ತು ಊರ್ವಶಿ (ಕಾಬಿಲ್) ಮಧ್ಯೆಯೂ ಒಂದು ರೀತಿಯ ಸ್ಪರ್ಧೆಗೆ ಬಿ-ಟೌನ್ ಸಾಕ್ಷಿಯಾಗಲಿದೆ.

ಪೈಪೋರ್ಟಿ  ಏನೇ ಇದ್ದರೂ ಸನ್ನಿ ಲಿಯೋನ್‍ನಂಥ ಗ್ಲಾಮರ್ ನಟಿಯೇ ಕಾಬಿಲ್‍ನಲ್ಲಿ ಊರ್ವಶಿಯ ಹಸೀನೋ ಕಾ ದೀವಾನಾ ಹಾಡಿನ ಮೋಡಿಗೆ ಒಳಗಾಗಿದ್ದಾರೆ. ಈ ಕುರಿತು ಸನ್ನಿ ಟ್ವೀಟ್ ಮಾಡಿದ್ದಾಳೆ. ಭಾರತೀಯ ಚಿತ್ರೋದ್ಯಮಕ್ಕೆ ಹಾಟ್ ಹಾಟ್ ಹಾಟ್ ತಾರೆಯೊಬ್ಬಳು ಸಿಕ್ಕಿದ್ದಾಳೆ. ಆಕೆ ಬೇರೆ ಯಾರೂ ಅಲ್ಲ-ಊರ್ವಶಿ. ಆ ಹಾಡನ್ನು ನೋಡಿ ನಾನು ಥ್ರಿಲ್ ಆಗಿದ್ದೇನೆ. ನೀನು ನಿಜಕ್ಕೂ ಸೌಂದರ್ಯದ ಗಣಿ ಎಂದು ಊರ್ವಶಿಯನ್ನು ಪ್ರಶಂಸಿಸಿದ್ದಾಳೆ. ಸನ್ನಿಯಂಥ ಎದೆಗಾತಿಯೇ ತನ್ನ ಸೌಂದರ್ಯವನ್ನು ಹಾಡಿ ಹೊಗಳಿರುವುದಕ್ಕೆ ಊರ್ವಶಿ ಉಬ್ಬಿ ಹೋಗಿದ್ದಾಳೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin