ಹೋಬಳಿ ಕೇಂದ್ರಗಳ ಜೋಡಿ ರಸ್ತೆ ನಿರ್ಮಾಣ ಪೂರ್ಣ : ವೈಎಸ್‍ವಿ ದತ್ತಾ

ಈ ಸುದ್ದಿಯನ್ನು ಶೇರ್ ಮಾಡಿ

y-s-v--datta

ಕಡೂರು, ಡಿ.18-ಕ್ಷೇತ್ರದಲ್ಲಿ ಇದುವರೆವಿಗೂ ಅಭಿವೃದ್ಧಿ ಕಾಣದೆ ಕಳೆಗುಂದಿದ್ದ ಐದು ಹೋಬಳಿ ಕೇಂದ್ರಗಳಾದ ಯಗಟಿ, ಪಂಚನಹಳ್ಳಿ, ಚೌಳಹಿರಿಯೂರು, ಸಿಂಗಟಗೆರೆ ಚಿತ್ರಣವನ್ನೇ ಬದಲಾಯಿಸಿ ಜೋಡಿ ರಸ್ತೆ ನಿರ್ಮಾಣ ಕಾರ್ಯ ಮುಗಿದಿದ್ದು, ಹಿರೇನಲ್ಲೂರಿನ ರಸ್ತೆ ಹಾಗೂ ಜೋಡಿ ದೀಪಗಳ ಜೋಡಣೆಯಾಗಬೇಕಿದೆ ಎಂದು ಶಾಸಕ ವೈ.ಎಸ್.ವಿ.ದತ್ತಾ ತಿಳಿಸಿದರು.ಉಳುಕಿನಕಲ್ಲಿನಿಂದ ತಮ್ಮಟದಹಳ್ಳಿ ಗೇಟ್‍ವರೆಗೆ ಸುಮಾರು 27 ಕೋಟಿ ರೂ. ಅಂದಾಜು ವೆಚ್ಚದ 22 ಕಿ.ಮೀ. ದೂರದ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಿಸಿ ನಂತರ ಹಿರೇನಲ್ಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹಿರೇನಲ್ಲೂರು ಗ್ರಾಮದಲ್ಲಿ ಮೆಸ್ಕಾಂ ಕ್ರಾಸ್‍ವರೆವಿಗೆ ಸುಮಾರು 50 ಅಡಿ ರಸ್ತೆ ಅಗಲೀಕರಣ ಹಾಗೂ ಜೋಡಿ ರಸ್ತೆ ನಿರ್ಮಾಣ, ಚರಂಡಿ ಪೈಪ್‍ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಹಿರೇನಲ್ಲೂರುವರೆವಿಗೆ ಗುಣಮಟ್ಟದ ರಸ್ತೆ ಕಾಮಗಾರಿ ಮುಗಿದಿದೆ ಎಂದು ಹೇಳಿದರು.
ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಸುಮಾರು 80% ರಸ್ತೆಗಳ ಅಭಿವೃದ್ಧಿಯಾಗಿದೆ. ಅಂತರಘಟ್ಟೆ, ಹಡಗಲು ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾತಿ ಹಂತದಲ್ಲಿದೆ ಎಂದರು.ಹಿರೇನಲ್ಲೂರು ಗ್ರಾ.ಪಂ. ಅಧ್ಯಕ್ಷ ಹೆಚ್.ಎಲ್. ರವಿ, ಲೋಕೋಪಯೋಗಿ ಇಲಾಖೆ ಎ.ಇ.ಇ. ದಯಾನಂದ್, ಕಿರಿಯ ಅಭಿಯಂತರರಾದ ರಘುರಾಮ್, ಭಂಡಾರಿ ಶ್ರೀನಿವಾಸ್, ಸೀಗೆಹಡ್ಲು ಹರೀಶ್, ತನ್ವೀರ್ ಅಹಮದ್, ಇಸ್ರಾನ್, ಪುಟ್ಟಪ್ಪ ಮುಂತಾದವರು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin