ನಾಡಿಗೆ ಬಂದು ರಾಜಾರೋಷವಾಗಿ ಓಡಾಡಿದ ಸಿಂಹಿಣಿ : ಜನ ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಬಾದ್,ಡಿ.19- ಇತ್ತೀಚೆಗೆ ಎಲ್ಲೆಡೆ ಅರಣ್ಯ ಪ್ರದೇಶಗಳು ನಶಿಸುತ್ತಿದ್ದು , ಕಾಡುಪ್ರಾಣಿಗಳು ನಾಡಿಗೆ ಬರುವುದು ಸಾಮಾನ್ಯ ವಿಷಯವೇ. .. ಆದರೆ ಗುಜರಾತ್‍ನ ಹಳ್ಳಿಯೊಂದರಲ್ಲಿ ಇದ್ದಕ್ಕಿದ್ದಂತೆ ಹೆಣ್ಣು ಸಿಂಹವೊಂದು ನುಗ್ಗಿ ಊರಲ್ಲೆಲ್ಲ ಸಂಚರಿಸತೊಡಗಿದಾಗ ಜನ ಭಯಭೀತರಾಗಿ ಓಡಿಹೋದ ಘಟನೆ ನಡೆದಿದೆ. ಗುಜರಾತ್‍ನ ಅಮ್ರೇಲಿ ಜಿಲ್ಲೆಯ ವೀರ್‍ಪುರ್ ಎಂಬ ಗ್ರಾಮದಲ್ಲಿ ಕಳೆದ ರಾತ್ರಿ ಸಿಂಹಿಣಿಯೊಂದು ಪ್ರವೇಶಿಸಿ ಊರಿನ ದಾರಿಗಳಲ್ಲಿ ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡಲಾರಂಭಿಸಿದೆ. ಇದನ್ನು ನೋಡಿ ಜನ ಭಯದಿಂದ ಮನೆಗಳಲ್ಲಿ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಸಿಂಹಿಣಿ ಹಸುವೊಂದರ ಮೇಲೆ ದಾಳಿ ಮಾಡಿ ಸಾಯಿಸಿ ಭಕ್ಷಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಹೆಣ್ಣು ಸಿಂಹವನ್ನು ಸುರಕ್ಷಿತವಾಗಿ ಗೀರ್ ರಕ್ಷಿತ ಅರಣ್ಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin