ಪ್ಯುರ್ಟೊ ರಿಕೋ ಚೆಲುವೆ ಸ್ಟೇಫಾನಿಗೆ 2016ರ ಭುವನ ಸುಂದರಿ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

Miss-world

ಓಕ್ಸಾನ್ ಹಿಲ್, ಡಿ. 19-ಪ್ಯುರ್ಟೊ ರಿಕೋ ಚೆಲುವೆ ಸ್ಟೇಫಾನಿ ಡೆಲ್ ವ್ಯಾಲೆ ಭುವನ ಸುಂದರಿ-2016ರ ಕಿರೀಟ ಧರಿಸಿದ್ದಾರೆ. ನಿನ್ನೆ ರಾತ್ರಿ ನಡೆದ ವರ್ಣರಂಜಿತ ಅಂತಿಮ ಸ್ಪರ್ಧೆಯಲ್ಲಿ ಡೆಮಿನಿಕ್ ರಿಪಬ್ಲಿಕ್ ಮತ್ತು ಇಂಡೋನೆಷ್ಯಾದ ಸುಂದರಿಯರನ್ನು ಸ್ಟೇಫಾನಿ ಹಿಂದಕ್ಕೆ ಸರಿಸಿ ವಿಶ್ವಸುಂದರಿಯಾಗಿ ಮುಗುಳ್ನಗೆ ಚೆಲ್ಲಿದರು.   2015ರ ಭುವನಸುಂದರಿ ಸ್ಫೇನ್‍ನ ಮಿರಿಯಾ ಲಾಲಾಗುನಾ ಕೆರೆಬಿಯನ್ ದ್ವೀಪದ ಬೆಡಗಿಗೆ ಭುವನಸುಂದರಿ ಕಿರೀಟ ತೊಡಿಸುತ್ತಿದ್ದಂತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಮಂದಿ ಪ್ರಚಂಡ ಕರತಾಡನದೊಂದಿಗೆ ಹರ್ಷೋದ್ಗಾರ ಮಾಡಿದರು.

ಡೊಮಿನಿಕ್ ರಿಪಬ್ಲಿಕ್‍ನ ಯಾರಿಟ್ಜಾ ಮ್ಯೂಗುಲಿನಾ ರಮಿರೆಜ್ ಮತ್ತು ಇಂಡೋನೆಷ್ಯಾದ ನತಾಶಾ ಮ್ಯಾನುಯುಲ್ಲಾ ಅನುಕ್ರಮವಾಗಿ ಮೊದಲ ಮತ್ತು ದ್ವಿತೀಯ ರನ್ನರ್-ಅಪ್ ಪ್ರಶಸ್ತಿಗಳನ್ನು ಗಳಿಸಿದರು.  ಫೈನಲ್ ಫೈವ್ ಹಣಾಹಣಿಯಲ್ಲಿ ಕೀನ್ಯಾ ಮತ್ತು ಫಿಲಿಪ್ಪೈನ್ಸ್‍ನ ಚೆಲುವೆಯರೂ ಸ್ಪರ್ಧಿಸಿದ್ದರು.  ಕಂದು ಕಣ್ಣಿನ 19 ವರ್ಷದ ವಿದ್ಯಾರ್ಥಿಯಾಗಿರುವ ಈಕೆ ಸ್ಪಾನಿಶ್, ಇಂಗ್ಲಿಷ್, ಫ್ರೆಂಚ್ ಸೇರಿದಂತೆ ಬಹುಭಾಷೆ ಬಲ್ಲವಳಾಗಿದ್ದಾಳೆ. ಭುವನಸುಂದರಿ ಕಿರೀಟದೊಂದಿಗೆ ಮನರಂಜನಾ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂಬುದು ಈಕೆಯ ಬಯಕೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Miss-world-1

Miss-world-2

Miss-world-3

Miss-world-4

Miss-world-5

Facebook Comments

Sri Raghav

Admin