ಮತ್ತೊಂದು ಶಾಕ್ : ಹಳೆ ನೋಟ್’ಗಳ ಜಮಾವಣೆಗೂ ಬಿತ್ತು ಬ್ರೇಕ್..!

ಈ ಸುದ್ದಿಯನ್ನು ಶೇರ್ ಮಾಡಿ

Deposit-#Bank-01

ನವದೆಹಲಿ,ಡಿ.19-ಕಪ್ಪು ಹಣ ಬಚ್ಚಿಟ್ಟವರಿಗೆ ಮತ್ತೊಂದು ಶಾಕ್ ನೀಡಿರುವ ಕೇಂದ್ರ ಸರ್ಕಾರ ಬ್ಯಾಂಕ್‍ಗಳಲ್ಲಿ ಹಣ ಜಮಾವಣೆಗೆ ಮಿತಿ ಹೇರಿದೆ. ಹೊಸ ಅಧಿಸೂಚನೆ ಪ್ರಕಾರ 5 ಸಾವಿರ ರೂ.ಗಳಿಗಿಂತ ಹೆಚ್ಚು ಮೊತ್ತವನ್ನು ಒಂದೇ ಬಾರಿ ಮಾತ್ರ ಜಮೆ ಮಾಡಲು ಅವಕಾಶ ನೀಡಲಾಗಿದೆ. ಇದರೊಂದಿಗೆ ನಿಧಾನವಾಗಿ ಹಣ ಠೇವಣಿ ಮಾಡುವ ಯೋಜನೆ ಹೊಂದಿದ್ದವರಿಗೆ ಭಾರೀ ಹೊಡೆತ ಬಿದ್ದಂತಾಗಿದೆ.  ಇದರೊಂದಿಗೆ ನಿಧಾನವಾಗಿ ಹಣ ಠೇವಣಿ ಮಾಡುವ ಯೋಜನೆ ಹೊಂದಿದ್ದವರಿಗೆ ಭಾರೀ ಹೊಡೆತ ಬಿದ್ದಂತಾಗಿದೆ.

ಕೇಂದ್ರ ಹಣಕಾಸು ಇಲಾಖೆ ಡಿಸೆಂಬರ್ 30ರವರೆಗೆ ಒಂದು ಬಾರಿ ಜಮೆ ಮಾಡಲು ಅವಕಾಶ ನೀಡಲಾಗಿದೆ. ಈ ನಿಯಮ ಉಳಿತಾಯ ಖಾತೆ ಸೇರಿದಂತೆ ಎಲ್ಲಾ ಖಾತೆಗಳಿಗೂ ಅನ್ವಯಿಸಲಿದೆ. ಕೆವೈಸಿ(ಬ್ಯಾಂಕ್‍ನಿಂದ ಗ್ರಾಹಕರಿಗೆ ನೀಡುವ ದೃಢೀಕರಣ) ಇದ್ದರೆ ಮಾತ್ರ ಎರಡು ಲಕ್ಷ ರೂ.ಗಳವರೆಗೆ ಬ್ಯಾಂಕ್‍ಗಳಲ್ಲಿ ಠೇವಣಿ ಇಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ 5000 ರೂ.ಗಳವರೆಗೆ ಹಳೆ ನೋಟು ಠೇವಣಿ ಇಡಲು ಅವಕಾಶವಿದೆ.

ಡಿ.30ರವರೆಗೆ ಒಮ್ಮೆ ಮಾತ್ರ 5000 ರೂ.ಗಳಿಗಿಂತ ಅಧಿಕ ಹಳೆ ನೋಟುಗಳನ್ನು ಠೇವಣಿ ಇಡಬಹುದಾಗಿದೆ ಎಂದು ಸರ್ಕಾರ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಿ.17ರಂದು ಹಣಕಾಸು ಸಚಿವಾಲಯದಿಂದ ಹೊರಡಿಸಲಾದ ನೋಟು ನಿಷೇಧ ಕುರಿತ ಹೊಸ ಆದೇಶದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಹೊಸ ಕಪ್ಪು ಹಣ ಬಹಿರಂಗಗೊಳಿಸಲು ಠೇವಣಿ ಮೊತ್ತದ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಲಾಗಿತ್ತು.  ಆದರೆ ಈಗ 5000 ರೂ.ಗಳಿಗಿಂತ ಹೆಚ್ಚಿನ ಮೊತ್ತದ ಹಳೆ ನೋಟುಗಳ ಜಮಾವಣೆ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದೆ. 5000 ರೂ.ಗಳಿಗಿಂತ ಕಡಿಮೆ ಮೊತ್ತದ ಹಣವನ್ನು ಜಮೆ ಮಾಡಲು ಅವಕಾಶವಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin