ಶಶಿಕಲಾ ಫ್ಲೆಕ್ಸ್ ಹರಿದು ಆಕ್ರೋಶ ವ್ಯಕ್ತಪಡಿಸಿದ ಎಐಎಡಿಎಂಕೆ ಕಾರ್ಯಕರ್ತರು

ಈ ಸುದ್ದಿಯನ್ನು ಶೇರ್ ಮಾಡಿ

Sasikala-01

ಚೆನ್ನೈ, ಡಿ.19- ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನದ ನಂತರ ಅವರ ಪರಮಾಪ್ತೆ ಶಶಿಕಲಾ ನಟರಾಜನ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಎಐಎಡಿಎಂಕೆ ಕಾರ್ಯಕರ್ತರು ಕೆಲವೆಡೆ ಅವರ ಫ್ಲೆಕ್ಸ್ ಮತ್ತು ಬ್ಯಾನರ್‍ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಪುರಿ ಸೇರಿದಂತೆ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಅಣ್ಣಾ ಡಿಎಂಕೆ ಕಾರ್ಯಕರ್ತರು ಶಶಿಕಲಾ ಅವರ ಬ್ಯಾನರ್, ಪೋಸ್ಟರ್ ಮತ್ತು ಫ್ಲೆಕ್ಸ್‍ಗಳನ್ನು ಹರಿದು ಹಾಕಿದ್ದಾರೆ. ಆದರೆ, ಜಯಲಲಿತಾರ ಭಾವಚಿತ್ರಕ್ಕೆ ಯಾವುದೇ ರೀತಿ ಧಕ್ಕೆ ಆಗಿಲ್ಲ.

ಪುರುಚ್ಚಿ ತಲೈವಿ ನಿಧನದ ನಂತರ ಶಶಿಕಲಾ ಪಕ್ಷದ ಎಲ್ಲ ವ್ಯವಹಾರಗಳಲ್ಲೂ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಎಂಬಂತೆ ವರ್ತಿಸುತ್ತಿದ್ದಾರೆ ಎಂಬುದು ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರ ಆಕ್ರೋಶವಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin