‘ಸದ್ದಾಂ ಹುಸೇನ್ ಬದುಕಿದ್ದರೆ ಐಎಸ್ಐಎಸ್ ಉಗ್ರ ಸಂಘಟನೆ ಹುಟ್ಟುತ್ತಲೇ ಇರಲಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Saddam-Hussein

ವಾಷಿಂಗ್ಟನ್, ಡಿ.19-ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಬದುಕಿದ್ದರೆ ಅತ್ಯಂತ ಅಪಾಯಕಾರಿ ಐಎಸ್ (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾದನೆ ಸಂಘಟನೆ ಹುಟ್ಟುತ್ತಲೇ ಇರಲಿಲ್ಲ ಎಂಬ ಗಮನಾರ್ಹ ಅಂಶವನ್ನು ಅಮೆರಿಕದ ಬೇಹುಗಾರಿಕ ಸಂಸ್ಥೆ-ಸಿಐಎ ನಿವೃತ್ತ ಉನ್ನತಾಧಿಕಾರಿ ಜಾನ್ ನಿಕ್ಸನ್ ವಿಶ್ಲೇಷಿಸಿದ್ದಾರೆ. ಜಾಜ್ ಬುಷ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇರಾಕ್ ಮೇಲೆ ನಡೆಸಿದ ಸಮರದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ ಅದನ್ನು ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿತ್ತು. ಇದು ಅಮೆರಿಕ ಕೈಗೊಂಡ ದೊಡ್ಡ ಪ್ರಮಾದ ಎಂದು ಹೇಳಿರುವ ಅವರು ತಮ್ಮ ಅಭಿಪ್ರಾಯಕ್ಕೆ ಪೂರಕವಾಗಿ ಕೆಲವು ಅಂಶಗಳನ್ನೂ ವಿವರಿಸಿದ್ದಾರೆ.

ಇರಾಕ್ ಮೇಲೆ ಅಮೆರಿಕ ದಾಳಿ ಮಾಡಬಾರದಿತ್ತು. ಸದ್ದಾಂ ಹುಸೇನ್ ಸರ್ಕಾರ ಮುಂದುವರಿಯಲು ಅವಕಾಶ ನೀಡಬೇಕಿತ್ತು. ಇದಕ್ಕೆ ಆಸ್ಪದ ನೀಡಿದ್ದರೆ ಅತಿ ಭಯಾನಕ ಐಎಸ್ ಉಗ್ರಗಾಮಿ ಸಂಘಟನೆ ಹುಟ್ಟುತ್ತಲೂ ಇರಲಿಲ್ಲ, ಬೆಳೆಯುತ್ತಲೂ ಇರಲಿಲ್ಲ ಎಂದು ತಮ್ಮ ಹೊಸ ಪುಸ್ತಕದಲ್ಲಿ ನಿಕ್ಸನ್ ವಿಮರ್ಶಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.  ಸದ್ದಾಂ ಸೆರೆಸಿಕ್ಕ ನಂತರ ನಿಕ್ಸನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇರಾಕ್‍ನನ್ನು ವಶಪಡಿಸಿಕೊಂಡ ನೀವು ಅಲ್ಲಿ ಆಡಳಿತ ನಡೆಸಲು ಸಂಪೂರ್ಣ ವಿಫಲರಾಗುತ್ತೀರಿ. ಏಕೆಂದರೆ ನೀವು ಇರಾಕಿ ಭಾಷೆ, ಇತಿಹಾಸ ಮತ್ತು ಅರಬ್ ಜನರ ಭಾವನೆಗಳು ಮತ್ತು ಮನಸ್ಥಿತಿಗಳನ್ನು ಅರ್ಥ ಮಾಡಿಕೊಂಡಿಲ್ಲ. ಮುಂದೊಂದು ದಿನ ಅದು ನಿಮಗೆ ದೊಡ್ಡ ಆತಂಕ ಉಂಟು ಮಾಡಲಿದೆ ಎಂದು ಸದ್ದಾಂ ಹೇಳಿದ್ದಾಗಿ ನಿಕ್ಸನ್ ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin