ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ ( 20-12-2016 )

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ  : ತಾಯಿ, ತಂದೆ, ಮಗ, ಸಹೋದರ, ನೆಂಟರು ಇವರ ಸೇರುವಿಕೆಯು ಶಾಶ್ವತವಲ್ಲ. ಅರವಟ್ಟಿಗೆಗೆ ನೀರು ಕುಡಿಯಲು ಬಂದ ಜನರಂತೆ, ನದಿಯಲ್ಲಿ ತೇಲುತ್ತಿರುವ ಮರದ ತುಂಡುಗಳಂತೆ ಕ್ಷಣಿಕ.  – ಗರುಡ ಪುರಾಣ

Rashi x1

ಪಂಚಾಂಗ : ಮಂಗಳವಾರ, 20.12.2016

ಸೂರ್ಯ ಉದಯ ಬೆ.06.37 / ಸೂರ್ಯ ಅಸ್ತ  ಸಂ.05.58
ಚಂದ್ರ ಅಸ್ತ ಬೆ.11.50 / ಚಂದ್ರ ಉದಯ ರಾ.12.06
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ  (ಸಾ.06.44)
ನಕ್ಷತ್ರ: ಪೂರ್ವಫಲ್ಗುಣಿ  (ಮ.02.15) / ಯೋಗ: ಆಯುಷ್ಮಾನ್ (ರಾ.05.30) / ಕರಣ: ಭವ (ಸಾ.06.44)
ಮಳೆ ನಕ್ಷತ್ರ: ಮೂಲ / ಮಾಸ: ಧನಸ್ಸು / ತೇದಿ: 06

ರಾಶಿ ಭವಿಷ್ಯ :

ಮೇಷ : ಕೆಲಸಗಳಲ್ಲಿನ ಮುನ್ನಡೆಯಿಂದ ಸಮಾಧಾನ ತಂದರೂ ಕಿರಿಕಿರಿ ತಪ್ಪದು, ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿ
ವೃಷಭ : ದೂರ ಸಂಚಾರದಿಂದ ಕಾರ್ಯಸಾಧನೆ
ಮಿಥುನ: ಸುಖ-ಸಂತೋಷಗಳು ಮರೀಚಿಕೆಯಾಗ ಲಿವೆ, ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ
ಕಟಕ: ಮಂಗಳ ಕಾರ್ಯಗಳಿಗೆ ಧನವ್ಯಯ ಮಾಡುವಿರಿ
ಸಿಂಹ: ಆಗಾಗ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯದಿಂದ ಕಲಹ
ಕನ್ಯಾ: ನೀವು ಮಾಡುವ ಕೆಲಸ-ಕಾರ್ಯಗಳಲ್ಲಿ ಸ್ನೇಹಿತ ವರ್ಗದವರಿಂದ ಸಹಕಾರ ಸಿಗಲಿದೆ
ತುಲಾ: ಸಾಮಾಜಿಕ ಚಟು ವಟಿಕೆಗಳಲ್ಲಿ ಉತ್ಸಾಹ ತೋರುವಿರಿ
ವೃಶ್ಚಿಕ : ಬಂಧು-ಮಿತ್ರರಿಂದ ವಿಶೇಷ ರೀತಿಯಲ್ಲಿ ಸಹಕಾರ ಧನುಸ್ಸು: ಪ್ರಯತ್ನಬಲದಿಂದ ಕಾರ್ಯ ಸಾಧಿಸುವಿರಿ
ಮಕರ: ದೀರ್ಘಕಾಲದ ಆಸೆಗಳು ಈಡೇರಲಿವೆ
ಕುಂಭ: ಆರ್ಥಿಕವಾಗಿ ಅಡಚಣೆಗಳಿದ್ದರೂ ಆಗಾಗ ಧನಾಗಮನದಿಂದ ತಾಪತ್ರಯವಾಗುವುದಿಲ್ಲ
ಮೀನ: ವ್ಯವಹಾರದಲ್ಲಿ ಹಣ ಹೂಡಿಕೆಗೆ ಸಕಾಲ, ನೌಕರ ವರ್ಗದವರಿಂದ ಸಹಕಾರ ದೊರೆಯುತ್ತದೆ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin