ಇವಳನ್ನು ಕೊಂದವರಿಗೆ 10 ಲಕ್ಷ ಡಾಲರ್ ಬಹುಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

Joanna-Palani

ಲಂಡನ್, ಡಿ.20-ಸಿರಿಯಾ ಮತ್ತು ಇರಾಕ್‍ನಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ್ದ ದಿಟ್ಟ ಕುರ್ದಿಶ್ ಯುವತಿಗೆ ಈಗ ಪ್ರಾಣಾಪಾಯ ಎದುರಾಗಿದೆ. ಈಕೆಯನ್ನು ಕೊಂದವರಿಗೆ ತಾನು 10 ಲಕ್ಷ ಡಾಲರ್ ನೀಡುವುದಾಗಿ ವಿಶ್ವದ ಅತ್ಯಂತ ಭಯಾನಕ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಘೋಷಿಸಿದೆ. ಕುರ್ದಿರ್ಶ ಮೂಲದ ಡೆನ್ಮಾಕ್ ಯುವತಿ ಜೋಅನ್ನಾ ಪಲಾನಿ(23) 2014ರಲ್ಲಿ ವಿಶ್ವವಿದ್ಯಾಲಯ ತೊರೆದು ಸಿರಿಯಾ ಮತ್ತು ಇರಾಕ್‍ನಲ್ಲಿ ಎಸ್‍ಐ ವಿರುದ್ಧ ಹೋರಾಡಿ ಭಯೋತ್ಪಾದಕರನ್ನು ಬೆಚ್ಚಿ ಬೀಳಿಸಿದ್ದಳು. ಈಗ ಪಲಾನಿ ಜೈಲಿನಲ್ಲಿದ್ದಾಳೆ.
12 ತಿಂಗಳ ಪ್ರಯಾಣ ನಿಷೇಧ ಉಲ್ಲಂಘಿಸಿ ದೇಶವನ್ನು ತೊರೆದ ಆರೋಪಕ್ಕಾಗಿ (ಡೆನ್ಮಾರ್ಕ್‍ನಿಂದ ಮಧ್ಯಪ್ರಾಚ್ಯಕ್ಕೆ ಪಲಾಯನ ಮಾಡಿದ) ಕೊಪನ್‍ಹೇಗೆನ್‍ನಲ್ಲಿ ಈಕೆ ವಿಚಾರಣೆ ಎದುರಿಸುತ್ತಿದ್ದಾಳೆ. ನಾಳೆ ಆಕೆಯ ವಿಚಾರಣೆ ನಡೆಯಲಿದ್ದು, ಆಕೆ ತಪ್ಪಿತಸ್ಥಳು ಎಂದು ಸಾಬೀತಾದರೆ ಹೊಸ ಕಾನೂನಿನ ಅಡಿ ಮತ್ತೆ ಎರಡು ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಐಎಸ್ ಉಗ್ರರ ವಿರುದ್ಧ ಹೋರಾಡಿ ಡೆನ್ಮಾರ್ಕ್‍ಗೆ ಹಿಂದಿರುಗಿದ್ದ ಪಲಾನಿಗೆ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಪ್ರಾಣಬೆದರಿಕೆಗಳು ಬಂದಿದ್ದವು. ಕಳೆದ ವರ್ಷ ಡೆನ್ಮಾರ್ಕ್ ಪೆÇಲೀಸರು ಈಕೆಯ ಪಾಸ್‍ಪೋರ್ಟ್‍ನನ್ನು ವಶಕ್ಕೆ ತೆಗೆದುಕೊಂಡಿದ್ದರು. ನಾನು ಡೆನ್ಮಾರ್ಕ್‍ನ ವೀರ ಮಹಿಳೆ. ನಾನು ಯಾವುದೇ ದೇಶಕ್ಕೆ ಆತಂಕ ಉಂಟು ಮಾಡುವುದಿಲ್ಲ. ಐಎಸ್ ಉಗ್ರರ ವಿರುದ್ಧ ಹೋರಾಟಕ್ಕೆ ನೇರ ಬೆಂಬಲ ನೀಡಿದೆ ಅಷ್ಟೇ ಎಂದು ಆಕೆ ಬಂಧನಕ್ಕೆ ಒಳಗಾಗುವ ಮುನ್ನ ಫೇಸ್‍ಬುಕ್‍ನಲ್ಲಿ ಈ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಳು.

ಪಲಾನಿಯ ಕುಟುಂಬದವರು ಇರಾನ್‍ನ ಕುರ್ದಿಶ್ ಮೂಲದವರು. ಮೊದಲನೇ ಕೊಲ್ಲಿ ಯುದ್ಧ (ಗಲ್ಫ್ ವಾರ್) ಸಂದರ್ಭದಲ್ಲಿ ಈಕೆ ಇರಾಕ್‍ನ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ್ದಳು. ಆಕೆಯ ಕುಟುಂಬ ಯುದ್ಧದಿಂದ ಸಂತಸ್ತ್ರಗೊಂಡು ಡೆನ್ಮಾಕ್‍ನಲ್ಲಿ ಆಶ್ರಯ ಪಡೆದಿತ್ತು. ರಾಜಕೀಯ ಪದವಿ ವ್ಯಾಸಂಗ ಮಾಡುತ್ತಿದ್ದ ಈಕೆ ಶಿಕ್ಷಣ ತೊರೆದು 2014ರಲ್ಲಿ ಐಎಸ್ ವಿರುದ್ಧ ಹೋರಾಡಲು ಕುರ್ದಿಶ್ ಕ್ರಾಂತಿಕಾರಿ ಪಡೆಗೆ ಸೇರಿದಳು. ಅಲ್ಲದೇ ಅನೇಕ ಐಎಸ್ ಉಗ್ರರನ್ನು ಕೊಂದು ಹಾಕಿದ್ದಳು. ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ನಾನು ಕುರ್ದಿಶ್ ಪಡೆ ಜೊತೆ ಹೋರಾಟ ನಡೆಸಿದ್ದಾಗಿ ಹೇಳಿಕೊಂಡಿದ್ದಳು.

ಈಕೆಯ ಆಕ್ರಮಣ ಮತ್ತು ಯುದ್ಧ ಕೌಶಲ್ಯದಿಂದ ಬೆಚ್ಚಿಬಿದ್ದ ಐಎಸ್ ಉಗ್ರರು ಈಕೆ ಜೈಲಿನಿಂದ ಹೊರಬರುವುದನ್ನೇ ಕಾಯುತ್ತಿದ್ದಾರೆ. ಪಲಾನಿಯನ್ನು ಕೊಂದರೆ 10 ಲಕ್ಷ ಡಾಲರ್‍ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಕಳೆದ ಒಂದು ವಾರದಿಂದ ಈ ಬಹುಮಾನ ಪ್ರಸ್ತಾವನೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin